ಬಂಟ್ವಾಳ: ಕಳ್ಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೊಡಂಬಿಲ ಸೇಕ್ರೆಡ್ ಹಾರ್ಟ್  ಚರ್ಚ್ ನ ಕ್ಯಾಥೋಲಿಕ್ ಸಭಾ ಘಟಕದ ವತಿಯಿಂದ  ಮಳೆ ಕೊಯ್ಲು ಅಭಿಯಾನ 2026 ಪ್ರಾತ್ಯಕ್ಷಿಕೆ ಕಾರ್ಯಕ್ರಮ ಕನಪಾಡಿ ನೋರ್ಬರ್ಟ್ ಲೋಬೋ ಅವರ ಮನೆ ಪರಿಸರದಲ್ಲಿ ನಡೆಯಿತು.

 

ಅತಿಥಿಯಾಗಿ ಭಾಗವಹಿಸಿದ್ದಚರ್ಚ್ ನ ಧರ್ಮಗುರುಗಳಾದ ಆಂಟನಿ ಲೋಬೊ ಅವರು ಮಾತನಾಡಿ, ಪ್ರಸ್ತುತ ಕಾಲದಲ್ಲಿ ಮಳೆ ನೀರನ್ನು ಬೋರ್ ವೆಲ್ ಗೆ ಇಂಗಿಸುವ  ಹಾಗೂ ಮಳೆ ನೀರನ್ನು ಉಪಯೋಗಿಸುವ ಬಗ್ಗೆ ಜನರಿಗೆ ಮಾಹಿತಿ ನೀಡಿದರು.

ಕಳ್ಳಿಗೆ ಗ್ರಾ.ಪಂ.ನ ಪಿಡಿಒ ಚಂದ್ರಾವತಿ ಮಾತನಾಡಿ, ಬೋರ್ ವೆಲ್ ಗಳಿಗೆ ನೀರು ಇಂಗಿಸುವ ಮಹತ್ವವನ್ನು ತಿಳಿಸಿದರಲ್ಲದೆ ಇಂತಹ ಕೆಲಸಗಳಿಗೆ ಪಂಚಾಯಿತಿ ವತಿಯಿಂದಲು  ಅನುದಾನವನ್ನು  ಒದಗಿಸಿ ಕೊಡುವುದಾಗಿ ಭರವಸೆ ನೀಡಿದರು.

ಕ್ಯಾಥೋಲಿಕ್ ಸಭಾ ಘಟಕದ ಅಧ್ಯಕ್ಷ ಮೆಲ್ವಿನ್ ಮೊಂತೆರೋ ಸ್ವಾಗತಿಸಿ, ಕಾರ್ಯದರ್ಶಿ ಶಾಲೆಟ್ ಲೋಬೊ ವಂದಿಸಿದರು. ಕ್ಯಾಥೋಲಿಕ್ ಸಭಾ ಸದಸ್ಯರಾದ ಫ್ರಾನ್ಸಿಸ್ ಪ್ರಸ್ರಾವನೆಗೈದರು. ಸದಸ್ಯ ಪ್ರವೀಣ್ ಮೊಂತೆರೋ ಕಾರ್ಯಕ್ರಮ ನಿರೂಪಿಸಿದರು

By Suddi9

Leave a Reply

Your email address will not be published. Required fields are marked *