ಬಂಟ್ವಾಳ: ಮದ್ಯ ವ್ಯಸನಿಗಳ ಮನ ಪರಿವರ್ತನೆಯ ಕಾರ್ಯ ಮದ್ಯವರ್ಜನ ಶಿಬಿರದ ಮೂಲಕ ಆಗುತ್ತಿದ್ದು,ಸಮಾಜಮುಖಿಯಾಗಿ ಸುಧಾರಣೆಯಾಗಲು ಇದು ಮೊದಲ ಹೆಜ್ಜೆ ಎಂದು ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ಶ್ರೀಪಾದ ಪಾಂಗಣ್ಣಾಯ ಹೇಳಿದರು.. ‌

ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ವಾಮದಪದವು ಇದರ ಆಶ್ರಯದಲ್ಲಿ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 8 ದಿನಗಳ ಕಾಲ ವಾಮದಪದವು ಬಸ್ತಿಕೋಡಿಯ ಪದ್ಮಾವತಿ ಸಭಾಭವನದಲ್ಲಿ ನಡೆಯಲಿರುವ  2076ನೇ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಕುಡಿತದ ಚಟದಿಂದ ಜೀವನವನ್ನೇ ಕಳೆದುಕೊಂಡಾತನನ್ನು ಮನ ಪರಿವರ್ತಿಸಿ ನವಜೀವನ ನೀಡುವಂತ ಮಹತ್ಕಾರ್ಯ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ನಡೆಸುತ್ತಿರುವುದು ಪುಣ್ಯದ ಕಾರ್ಯ ಎಂದು ಅವರು ಹೇಳಿದರು.


ಶಿಬಿರದ ವ್ಯವಸ್ಥಾಪನ ಸಮಿತಿಯ ಗೌರವಾಧ್ಯಕ್ಷ, ಉದ್ಯಮಿ ಹರೀಂದ್ರ ಪೈ ನೈನಾಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವ್ಯಸನ ಮುಕ್ತ ಜೀವನ ನಡೆಸುವ ನಿಟ್ಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ‌ ಗ್ರಾಮಾಭಿವೃದ್ದಿ ಯೋಜನೆ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ. ದುಶ್ಚಟವನ್ನು ದೂರ ಮಾಡಿ  ಉತ್ತಮ ಜೀವನ ನಡೆಸಲು ಈ ಶಿಬಿರ ಪ್ರೇರಣೆಯಾಗಲಿದೆ ಎಂದರು.
ಬಂಟ್ವಾಳ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿಸೋಜಾ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಜಿ.ಪಂ. ಮಾಜಿ ಸದಸ್ಯರಾದ ತುಂಗಪ್ಪ ಬಂಗೇರ, ಪದ್ಮಶೇಖರ್ ಜೈನ್,
ಸುಲೋಚನಾ ಜಿ.ಕೆ ಭಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಡಿ. ಶಿಬಿರಕ್ಕೆ ಶುಭ ಹಾರೈಸಿದರು.
ಜನಜಾಗೃತಿ ವೇದಿಕೆಯ ನಿಯೋಜಿತ ಅಧ್ಯಕ್ಷ ರಾಜಾರಾಮ ಶೆಟ್ಟಿ ,  ಕೇಂದ್ರ ಒಕ್ಕೂಟದ ಅಧ್ಯಕ್ಷ ಚಿದಾನಂದ ರೈ ಕಕ್ಯ, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಎಸೈ ಚಿದಾನಂದ, ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಉಪಾಧ್ಯಕ್ಷರಾದ ಗೋಪಾಕೃಷ್ಣ ಚೌಟ
ಪುರುಷೋತ್ತಮ ಶೆಟ್ಟಿ ವಾಮದಪದವು, ಪ್ರವೀಣ್ ಕಾಡಬೆಟ್ಟು, ಸದಾನಂದ‌ನಾವೂರು, ಕೃಷ್ಣಪ್ಪ ಅಲ್ಲಿಪಾದೆಜಗದೀಶ್ ಕೊಯಿಲ, ಮಾಣಿಕ್ಯ ರಾಜ್ ಜೈನ್, ಅರ್ಕಕೀರ್ತಿ ಇಂದ್ರ,‌ಆನಂದ ಆಚಾರ್ಯ, ಮೋಹನ್ ಸಾಲ್ಯಾನ್,ಪುರುಷೋತ್ತಮ ಪೂಜಾರಿ ಸರಪಾಡಿ, ಪ್ರಕಾಶ್ ಪೂಜಾರಿ,ಸದಾನಂದ ಶೀತಲ್, ಭಾರತಿ ಚೌಟ, ಅರುಣ್ ಕುಮಾರ್ ಇಂದ್ರ, ಶೇಖರ್ ಸಾಮಾನಿ, ಹರೀಶ್ ಪ್ರಭು, ಶಿಬಿರಾಧಿಕಾರಿ ರಮೇಶ್, ಆರೋಗ್ಯ ಸಹಾಯಕಿ ಜಯಲಕ್ಷ್ಮೀ,
ಚೆನ್ನೈತ್ತೋಡಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ವನಿತಾ , ಪ್ರಕಾಶ್ ಉಪಸ್ಥಿತರಿದ್ದರು.
ಯೋಜನಾಧಿಕಾರಿ ಜಯಾನಂದ ಪಿ. ಸ್ವಾಗತಿಸಿದರು ಜನಜಾಗೃತಿ ವೇದಿಕೆ ಉಡುಪಿ ಪ್ರಾದೇಶಿಕ ಯೋಜನಾಧಿಕಾರಿ  ಗಣೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಮಾಧವ ವಂದಿಸಿದರು

By Suddi9

Leave a Reply

Your email address will not be published. Required fields are marked *