ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ವಿಟ್ಲ ಇದರ ಕಲ್ಲಡ್ಕ ವಲಯದ ಕಲ್ಲಡ್ಕ ಹಾಗೂ ಗೋಳ್ತಮಜಲು ” ಎ” ಒಕ್ಕೂಟದ ತ್ರೈಮಾಸಿಕ ಸಭೆಯು ಕಲ್ಲಡ್ಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಕಲ್ಲಡ್ಕ ವಲಯ ಅಧ್ಯಕ್ಷರಾದ ತುಳಸಿ ವಹಿಸಿದ್ದರು.

ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕರಾದ ಶುಕರಾಜ್ ಅವರು ಯೋಜನೆಯ ಗುಂಪುಗಳ ಕಾರ್ಯ, ಜವಾಬ್ದಾರಿ, ಗುಂಪುಗಳಿಗೆ ನೀಡಲಾಗುವ ಸಾಲ ಸೌಲಭ್ಯಗಳು, ಆರೋಗ್ಯ ವಿಮೆ ಹಾಗೂ ಪ್ರಸಕ್ತ ಸಾಲಿನಲ್ಲಿ ಕಲ್ಲಡ್ಕ ಹಾಗೂ ಗೋಳ್ತಮಜಲು ” ಎ ” ಒಕ್ಕೂಟ ವ್ಯಾಪ್ತಿಯಲ್ಲಿ ಯೋಜನೆಯಿಂದ ದೊರೆತ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗೋಳ್ತಮಜಲು ‘ ಎ” ಒಕ್ಕೂಟವನ್ನು ಕಲ್ಲಡ್ಕ ಒಕ್ಕೂಟದೊಂದಿಗೆ ವಿಲೀನಗೊಳಿಸಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಚಿದಾನಂದ ಪಟ್ಟಕೋಡಿ ,ಉಪಾಧ್ಯಕ್ಷರಾಗಿ ಲೀಲಾವತಿ ಕೊಳಕಿರು, ಕಾರ್ಯದರ್ಶಿಯಾಗಿ ಸ್ವರ್ಣಲತಾ ಮನಿಮಾಜಲ್ , ಜೊತೆ ಕಾರ್ಯದರ್ಶಿಯಾಗಿ ಧನಂಜಯ ಬೊಂಡಲ ,ಕೊಶಾಧಿಕಾರಿಯಾಗಿ ವಿನೋದ.ಹಾಗೂ ವೆಂಕಪ್ಪ ಗೋಳ್ತಮಜಲು,ಗೀತಾ ಗೋಳ್ತಮಜಲು, ದಾಖಲಾತಿ ಸಮಿತಿಯಲ್ಲಿ ಶಶಿಕಲಾ, ಅರುಣಾಕ್ಷಿ, ತ್ರಿವೇಣಿ, ಯವರನ್ನು ಆಯ್ಕೆ ಮಾಡಲಾಯಿತು.
ಗೋಳ್ತಮಜಕು ‘ ಎ’ ಒಕ್ಕೂಟದ ಅಧ್ಯಕ್ಷ ಮಮತಾ, ಪದಾಧಿಕಾರಿಗಳಾದ ಉಷಾ, ಬೇಬಿ,ಮಮತ, ವೆಂಕಪ್ಪ, ದೇವಕಿ ,ಒಕ್ಕೂಟ ದ ಸೇವಾ ಪ್ರತಿನಿಧಿ ಅಶ್ವಿನಿ ಉಪಸ್ಥಿತರಿದ್ದರು.
ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕಕಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.
