ಬಂಟ್ವಾಳ : ಆಕಾಂಕ್ಷ  ಚಾರಿಟೇಬಲ್ ಟ್ರಸ್ಟ್ ಮತ್ತು ಗೆಟಿಕ್ಸ್  ಹೆಲ್ತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್  ವತಿಯಿಂದ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯ ಎಲ್ಲಾ  ಮಕ್ಕಳಿಗೆ ಉಚಿತ ಬರವಣಿಗೆ ಪುಸ್ತಕ ವಿತರಿಸಲಾಯಿತು.
ಆಕಾಂಕ್ಷ ಚಾರಿಟೇಬಲ್ ಟ್ರಸ್ಟಿನ  ಪ್ರತಿನಿಧಿ  ಹೇಮಂತ್  ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ 2025-26 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ 603 ಅಂಕಗಳನ್ನು ಪಡೆದ  ಕು. ಶ್ರಾವ್ಯ ಳನ್ನು  ಸನ್ಮಾನಿಸಲಾಯಿತು.

ಪಾಣೆಮಂಗಳೂರು ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ  ನರೇಂದ್ರನಾಥ ಕುಡ್ವ, ಶ್ರೀ ಶಾರದಾ ಪ್ರೌಢಶಾಲೆಯ ಸಂಚಾಲಕರಾದ ಡಾ.ಪಿ. ವಿಶ್ವನಾಥ್ ನಾಯಕ್  ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ  ಶಿವಪ್ಪ ನಾಯಕ್  ಸ್ವಾಗತಿಸಿ, ಹಿರಿಯ ಶಿಕ್ಷಕಿ  ವೀಣಾ ವಂದಿಸಿ,  ಸುಧಾಕರ್ ಆಕಾಂಕ್ಷ ಚಾರಿಟೇಬಲ್ ಟ್ರಸ್ಟಿನ ಕುರಿತು ಪರಿಚಯಿಸಿದರು, ಶಿಕ್ಷಕಿ  ತೇಜಸ್ವಿನಿ  ಸನ್ಮಾನ ಪತ್ರ ಪಾಚಿಸಿ , ಶಿಕ್ಷಕ ಧನರಾಜ್ ಡಿ ಆರ್ ಕಾರ್ಯಕ್ರಮ ನಿರೂಪಿಸಿದರು.
ಶಾಲೆಯ  ಶಿಕ್ಷಕರು ಸಹಕರಿಸಿದರು. 

By Suddi9

Leave a Reply

Your email address will not be published. Required fields are marked *