ಗುರುಪುರ : ಉಳಾಯಿಬೆಟ್ಟು ಪಂಚಾಯತ್ ವ್ಯಾಪ್ತಿಯ ಪೆರ್ಮಂಕಿ ಮೂಲಕ ಮಲ್ಲೂರು, ಬೆಂಜನಪದವು ಸಂಪರ್ಕಿಸುವ ಒಳರಸ್ತೆಯ ಪರಾರಿಯಿಂದ ಮುಂದಕ್ಕೆ ಹೊಸ ಸೇತುವೆ ಬಳಿ ರಸ್ತೆ ತುಂಬೆಲ್ಲ ನೀರು ತುಂಬಿದ್ದರೆ, ಹತ್ತಿರದಲ್ಲಿ ಇನ್ನೂ ಮುಗಿಯದ ಕಿರು ಸೇತುವೆ ಕಾಮಗಾರಿಯಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ.

ಹೆದ್ದಾರಿಗೆ ನಿರ್ಮಿಸಲಾದ ಹೊಸ ಸೇತುವೆಯ ಪಕ್ಕ ರಸ್ತೆಬದಿಯಲ್ಲಿದ್ದ ಹಳೆ ತೋಡು ನೆಲಸಮಗೊಂಡಿದ್ದು, ಶುಕ್ರವಾರ ಸುರಿದ ಧಾರಾಕಾರ ಮಳೆಗೆ ರಸ್ತೆಯಲ್ಲಿ ಆಳೆತ್ತರ ನೀರು ತುಂಬಿದೆ. ಇಲ್ಲಿ ಚರಂಡಿ ನಿರ್ಮಿಸದೆ ಹೋದಲ್ಲಿ ಕಿರು ಸೇತುವೆ ಲೋಕಾರ್ಪಣೆಗೊಂಡರೂ ಮಳೆಗಾಲದಲ್ಲಿ ಪರಾರಿಯಿಂದ ಉಳಾಯಿಬೆಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ಉಳಾಯಿಬೆಟ್ಟು ಪಂಚಾಯತ್‌ನ ನಿಕಟಪೂರ್ವ ಸದಸ್ಯ ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.

ಇಲ್ಲೇ ಹತ್ತಿರದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿರು ಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಮಳೆ ಆರಂಭಕ್ಕೆ ಮುಂಚೆಯೇ ಕಿರು ಸೇತುವೆ ಲೋಕಾರ್ಪಣೆಗೊಳ್ಳಬೇಕು ಎಂದು ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಸದ್ಯ ಸೇತುವೆಗೆ ಗರ್ಡರ್ ಹಾಸಲಾಗಿದ್ದು, ಸರಿಯಾಗಿ ಕೆಲಸ ಮಾಡಿದರೆ ೧೦ರಿಂದ ೨೦ ದಿನದೊಳಗೆ ಪೂರ್ಣಗೊಳ್ಳಬಹುದು. ಕಾಮಗಾರಿಯ ವೇಗ ನೋಡುವಾಗ ತಿಂಗಳು ಕಳೆಯುವ ಸಾಧ್ಯತೆ ಇದೆ.

ಕಿರುಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊAಡ ಬಳಿಕ ಖಾಸಗಿ ಗದ್ದೆ ಪ್ರದೇಶದಲ್ಲಿ ಮಣ್ಣಿನ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ. ಮಳೆಗೆ ಈ ರಸ್ತೆ ಸಂಪೂರ್ಣ ಹೊಂಡಾಗುAಡಿಯಾಗಿದ್ದು, ಪರಾರಿಯಿಂದ ಪೆರ್ಮಂಕಿ ಕಡೆಗೆ ಸಂಚರಿಸುವುದೇ ಕಷ್ಟದ ಕೆಲಸವಾಗಿದೆ. ಒಂದೊಮ್ಮೆ ಮಳೆ ಜಾಸ್ತಿಯಾದಲ್ಲಿ ಕೃಷಿಗೆ ಅನುಕೂಲವಾಗುವಂತೆ ರಸ್ತೆ ಮುಚ್ಚಬೇಕಾಗುತ್ತದೆ. ಆಗ ಸರ್ಕಾರಿ ಬಸ್ ಸಹಿತ ಸಾರ್ವಜನಿಕರ ಸಂಪರ್ಕವೇ ಕಡಿದು ಹೋಗಲಿದೆ. ಹೊಸ ಸೇತುವೆ ಬಳಿ ತಕ್ಷಣ ಚರಂಡಿ ನಿರ್ಮಿಸುವಂತೆ ಹಾಗೂ ಉಳಾಯಿಬೆಟ್ಟಿನಲ್ಲಿ ಕಿರು ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಅವರು(ವಿಶ್ವನಾಥ ಶೆಟ್ಟಿ) ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *