ಬಂಟ್ವಾಳ:   ಹೊಸ ಕನಸುಗಳೊಂದಿಗೆ ಹೊಸ ಶೈಕ್ಷಣಿಕ ವರ್ಷವನ್ನು ಆರಂಭಿಸಿರುವ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು  ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಗೋವಿಂದರಾಜ್ ಹೇಳಿದರು.

ಅವರು  ಸೋಮವಾರ ಶಾಲಾ ಧ್ವಜವನ್ನು ಹಾರಿಸುವುದರೊಂದಿಗೆ ದ.ಕ.ಜಿ.ಪಂ. ಕಿ.ಪ್ರಾ.ಶಾಲೆ ಏಮಾಜೆಯ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾ ಮಾತೆ ಶಾರದೆಗೆ ಉದ್ಯಮಿ ಸದಾಶಿವಶೆಟ್ಟಿ  ಮಾಣಿ ರವರು ದೀಪವನ್ನು ಬೆಳಗುವುದರೊಂದಿಗೆ, ಎಲ್. ಕೆ.ಜಿ ಹಾಗೂ ಒಂದನೇ ತರಗತಿಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸವನ್ನು ಕೈಗೊಂಡು ವಿದ್ಯಾರ್ಥಿಗಳನ್ನು ಹೊಸ ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಲ್ಲಿಕಾ ಗಣೇಶ್ ಆಚಾರ್ಯ, ಉಪಾಧ್ಯಕ್ಷರಾದ ಹರೀಶ್ ಕುಲಾಲ್,  ಸಮಿತಾ ಡಿ ಪೂಜಾರಿ,  ಧನಂಜಯ ಗೌಡ  ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಡಾ. ತ್ರಿವೇಣಿ ರಮೇಶ್ ಸ್ವಾಗತಿಸಿ,ಸಹ ಶಿಕ್ಷಕ  ಉದಯ್ಚಂದ್ರ ಕೆ ಎಸ್ ವಂದಿಸಿದರು. ಶಿಕ್ಷಕಿ ಅಕ್ಷತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಐಸಮ್ಮ ಸಹಕರಿಸಿದರು 

By suddi9

Leave a Reply

Your email address will not be published. Required fields are marked *