ಬಂಟ್ಚಾಳ: ಕರಿಯಂಗಳ ಗ್ರಾಮದ ಪಲ್ಲಿಪಾಡಿ ಶ್ರೀ ಕೊಡಮಣಿತ್ತಾಯ, ಅಣ್ಣಪ್ಪ ಪಂಜುರ್ಲಿ ಹಾಗೂ ಕಲ್ಲುರ್ಟಿ ದೈವಗಳ ಚರಿತ್ರೆ, ಆಚರಣೆ ಮತ್ತು ಕ್ಷೇತ್ರ ಮಹಿಮೆಯನ್ನೊಳಗೊಂಡ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು
ಪಲ್ಲಿಪಾಡಿ ಕೊಡಮಣಿತ್ತಾಯ-ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಲ್ಲಿ ಈಚೆಗೆ ನಡೆದ ಸರಳ ಸಮಾರಂಭದಲ್ಲಿ ಗುತ್ತಿನವರಾದ ನರೇಶ್ ಪೂಂಜ ಅವರು ಪುಸ್ತಕ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ದೈವಗಳ ಇತಿಹಾಸ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಪ್ರಧಾನ ಅರ್ಚಕ ವೆಂಕಟೇಶ್ ತುಂಗ ಆಶೀರ್ವಚನ ಗೈದರು.. ಚಂದ್ರಹಾಸ ಪಲ್ಲಿಪಾಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಪುಸ್ತಕದ ಸಂಪಾದಕರಾದ ರಾಜಮಣಿ ರಾಮಕುಂಜ ಪುಸ್ತಕದ ಕುರಿತು ಮಾಹಿತಿ ನೀಡಿದರು. ಸ್ಥಳೀಯ ಹಿರಿಯರಾದ ಶ್ರೀಧರ ಮೂಲ್ಯ, ಸುಂದರ ಮೂಲ್ಯ, ಶೇಖರ ಟಿ. ಅಂಚನ್, ಶ್ರೀಧರ ಆಚಾರ್ಯ ಉಪಸ್ಥಿತರಿದ್ದರು. ಕಿಶೋರ್ ಪಲ್ಲಿಪಾಡಿ ಕಾರ್ಯಕ್ರಮ ನಿರೂಪಿಸಿದರು. ರಾಜ್ ಕೋಟ್ಯಾನ್ ಸ್ವಾಗತಿಸಿದರು.
