ಬಂಟ್ವಾಳ: ಮೂಡಬಿದ್ರೆ- ಬಂಟ್ವಾಳ ಲೋಕೋಪಯೋಗಿ ರಾಜ್ಯ ಹೆದ್ದಾರಿಯ ತಿರುವುಗಳಲ್ಲಿರುವ ಮರದ ರೆಂಬೆ ಹಾಗೂ ಬಳ್ಳಿಗಳನ್ನು ತೆರವುಗೊಳಿಸಿ, ರಸ್ತೆ ಬದಿಯ ಚರಂಡಿ ರಿಪೇರಿ ಮಾಡುವಂತೆ ಬಂಟ್ವಾಳ ಉಪವಿಭಾಗ ಲೋಕೋಪಯೋಗಿ ಇಲಾಖೆಗೆ ರೋಟರಿ ಕ್ಲಬ್  ಲೋರಟ್ಟೋ ಹಿಲ್ಸ್ ವತಿಯಿಂದ ಮನವಿ ನೀಡಲಾಯಿತು.

ಬಂಟ್ವಾಳ -ಮೂಡಬಿದ್ರೆ ರಸ್ತೆಯಲ್ಲಿ
ದಿನಂಪ್ರತಿ ಸಾವಿರಾರು ವಾಹನಗಳು ಓಡಾಟ ನಡೆಸುತ್ತಿವೆ. ಈ ರಸ್ತೆಯು ಕೆಲವು ತಿರುವುಗಳನ್ನು ಹೊಂದಿದ್ದು ಹಲವು ಕಡೆಗಳಲ್ಲಿ ಮರದ ಕೊಂಬೆಗಳು, ಬಳ್ಳಿಗಳು ರಸ್ತೆಗೆ ಬಾಗಿಕೊಂಡಿದ್ದು ಎದುರಿನಿಂದ ಬರುವ ವಾಹನಗಳು ಒಂದಕ್ಕೊಂದು ಕಾಣದಂತೆ ಇದೆ. ರಸ್ತೆಯ ಎರಡು ಬದಿಯಲ್ಲಿರುವ ಚರಂಡಿಗಳಲ್ಲಿ ಮಣ್ಣು ಮತ್ತು ಕಸಕಡ್ಡಿಗಳು ತುಂಬಿ ಕೊಂಡಿದ್ದು ಮಳೆ ನೀರು ರಸ್ತೆಯಲ್ಲಿಯೇ ಹರಿದು ಹೋಗುತ್ತಿದೆ.
 ಮಳೆಗಾಲ ಸಮಯದಲ್ಲಿ ಚರಂಡಿಯ ಮಣ್ಣು ತೆಗೆದು ಅಲ್ಲೇ ರಸ್ತೆಯ ಮೇಲೆ ಹಾಕುತ್ತಿರುವುದರಿಂದ ಮತ್ತೇ ಆ ಮಣ್ಣು ಮಳೆಯ ನೀರಿಗೆ ಚರಂಡಿ ಸೇರುತ್ತಿದೆ. ಆದುದರಿಂದ ಮಳೆಗಾಲ ಪ್ರಾರಂಭ ಮುಂಚೆಯೇ ರಸ್ತೆ ತಿರುವುಗಳಲ್ಲಿರುವ ಮರದ ಕೊಂಬೆ, ಬಳ್ಳಿಗಳನ್ನು ಕಡಿದು, ಚರಂಡಿ ರಿಪೇರಿ ಮಾಡಿ ವಾಹನ ಸವಾರರಿಗೆ ಸುಗಮವಾಗಿ ಹಾಗೂ ನಿರ್ಭಯವಾಗಿ ಸಂಚಾರ ಮಾಡುವರೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದೂ ಮನವಿಯಲ್ಲಿ ತಿಳಿಸಲಾಗಿದೆ.

 ರೋಟರಿ ಕ್ಲಬ್ ಬಂಟ್ವಾಳ ಲೋರೆಟ್ಟೋ ಹಿಲ್ಸ್ ಅಧ್ಯಕ್ಷ ರೋ ವಿಜಯ ಫೆರ್ನಾಂಡೀಸ್, ನಿಕಟ ಪೂರ್ವ ಅಧ್ಯಕ್ಷರಾದ ಸುರೇಶ ಶೆಟ್ಟಿ ಸಿದ್ದಕಟ್ಟೆ,ರಾಮಚಂದ್ರ ಶೆಟ್ಟಿಗಾರ್,ಆಂಟನಿ ಸಿಕ್ವೇರಾ ,ಐವನ್ ಮೆನೇಜಸ್, ಪ್ರೀತಮ್ ರೋಡ್ರಿಗಸ್, ರುಡಾಲ್ಪ್ ದೇವಾನಂದ ಮತ್ತಿತರರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *