ಬಂಟ್ವಾಳ: ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವ ಕಮಲ ಪೂಜಾರ್ತಿ ಮನೆಯ ಮೇಲ್ಛಾವಣಿ ದುರಸ್ತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್( ರಿ.) ಬಂಟ್ವಾಳ ಇದರ ವಗ್ಗ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಮಾಡಲಾಯಿತು.
ಕಡು ಬಡತನದ ಕಮಲ ಪೂಜಾರ್ತಿಯವರು ಮನೆಯಲ್ಲಿ ಒಬ್ಬರೇ ವಾಸ್ತವ್ಯವಿದ್ದು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಾಶಾಸನವನ್ನು ಪಡೆಯುತ್ತಿದ್ದಾರೆ. ಮನೆಯ ಮೇಲ್ಚಾವಣಿ ರಿಪೇರಿಗೆ ಬೇಕಾದ ಸಲಕರಣೆ ಹಾಗೂ ಊಟ ಉಪಹಾರದ ವ್ಯವಸ್ಥೆಯನ್ನು ಶೌರ್ಯ ತಂಡದ ಸದಸ್ಯರೇ ಮಾಡಿಕೊಂಡು
ಶ್ರಮದಾನ ಮಾಡಿದರು.

ಶ್ರಮದಾನ ಕಾರ್ಯದಲ್ಲಿ ಘಟಕ ಪ್ರತಿನಿಧಿ ಪ್ರವೀಣ್,ಸದಸ್ಯರುಗಳಾದ ಸಂಪತ್ ಶೆಟ್ಟಿ ,ಅಶೋಕ ಬೊಲ್ಮಾರ್, ಶಶಿಕಲ, ಪವಿತ್ರ ಅಶೋಕ ಹಾರೊದ್ದು ,ರಮೇಶ್ಮಹಾಬಲ ರೈ ನಾರಾಯಣಶೆಟ್ಟಿ , ಮೋಹನಂದ,ರೋಹಿತ್, ಜನಾರ್ಧನ ಹಾಗೂ ಧನು ಪೂಜೆ ಶೌರ್ಯ ಘಟಕದ ಸದಸ್ಯರಾದ ಪ್ರಮೋದ್ ಆಚಾರ್ಯ
ಭಾಗವಹಿಸಿದ್ದರು.
ಶ್ರಮದಾನದ ಬಳಿಕ ತಿಂಗಳ ಮಾಸಿಕ ಸಭೆ ನಡೆಸಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಪ್ರಸಕ್ತ ವರ್ಷದಲ್ಲಿ ಕಾಡಬೆಟ್ಟು ವಗ್ಗ ಶೌರ್ಯ ಘಟಕದ ವತಿಯಿಂದ 6ನೇ ಮನೆ ದುರಸ್ತಿಯ ಶ್ರಮದಾನವಾಗಿದೆ
