ಬಂಟ್ವಾಳ : ಕ್ರೀಡೆಯು ಕೇವಲ ದೈಹಿಕ ವ್ಯಾಯಾಮವಲ್ಲ, ಅದು ಮನುಷ್ಯರಲ್ಲಿ ಒಗ್ಗಟ್ಟು, ನಾಯಕತ್ವ ಗುಣ ಮತ್ತು ಏಕಾಗ್ರತೆಯನ್ನು ಮೂಡಿಸುವ ಶಕ್ತಿಯನ್ನು ಹೊಂದಿದೆ ಎಂದು ಬಂಟವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಜಗನ್ನಾಥ ಚೌಟ ಅವರು ಅಭಿಪ್ರಾಯಪಟ್ಟಿದ್ದಾರೆತಾಲೂಕಿನಮೂಡುಪಡುಕೋಡಿ‌ ದ. ಕ. ಜಿ. ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಯುವ ಬಂಟರ ಸಂಘ ಮತ್ತು ಕಾವಳಕಟ್ಟೆ ವಲಯ ಬಂಟರ ಸಂಘದದ ಆಶ್ರಯದಲ್ಲಿ, ಇರ್ವತ್ತೂರು, ಮೂಡುಪಡುಕೋಡಿ, ಪಿಲಾತಬೆಟ್ಟು, ಕಾವಳಪಡೂರು, ಕಾವಳಮೂಡೂರು ಹಾಗೂ ಕಾಡಬೆಟ್ಟು ಗ್ರಾಮದ ತಂಡಗಳಿಗಾಗಿ ಆಯೋಜಿಸಲಾಗಿದ್ದ “ಬಂಟರ ಕ್ರೀಡಾಕೂಟ-2026” ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಮೈದಾನದಲ್ಲಿ ಕಂಡುಬರುತ್ತಿರುವ ಶಿಸ್ತು ಮತ್ತು ಒಗ್ಗಟ್ಟು ನಮ್ಮ ಬಂಟರ ಸಂಘಟನೆ ನಮಗೆ ಕಲಿಸಿದ ಪಾಠ, ಯುವ ಪೀಳಿಗೆಯು ಹಿರಿಯರ ಮಾರ್ಗದರ್ಶನದಲ್ಲಿ ಸಾಗಿದಾಗ ಸಂಘಟನೆ ಮತ್ತಷ್ಟು ಬಲಿಷ್ಠವಾಗುತ್ತದೆ. ಕ್ರೀಡೆಯಲ್ಲಿ ಆರೋಗ್ಯಕರ ಪೈಪೋಟಿ ಇರಬೇಕೇ ಹೊರತು ದ್ವೇಷವಿರಬಾರದು. ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ, ಎಂದು ಹಾರೈಸಿದರು.
ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ  ಪ್ರಮೋದ್ ಕುಮಾರ್ ರೈ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡಾಕೂಟವು ಜನಾಂಗದ ಬಾಂಧವರ ನಡುವೆ ಸ್ನೇಹದ ಬೆಳಕನ್ನು ಹರಿಸಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವಳಕಟ್ಟೆ ವಲಯ ಬಂಟರ ಸಂಘದ ಅಧ್ಯಕ್ಷ  ಮೋಹನ್ ಶೆಟ್ಟಿ ನರ್ವಲ್ದಡ್ಡ ವಹಿಸಿದ್ದರು. ಬಂಟರ ಸಂಘ ಕಾವಳಕಟ್ಟೆ ಇದರ ಗೌರವಾಧ್ಯಕ್ಷ  ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಉಪಾಧ್ಯಕ್ಷ  ಪ್ರದೀಪ್ ಕುಮಾರ್ ಬೀಯಂತಬೆಟ್ಟು, ಚಂದ್ರಶೇಖರ ಶೆಟ್ಟಿ ಪುಳಿಮಜಲು, ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ  ಕಿಶೋರ್ ರೈ ಕಾಡಬೆಟ್ಟು ಉಪಾಧ್ಯಕ್ಷ ವಿವೇಕ್ ಶೆಟ್ಟಿ ಅಂಕದಲ, ಕ್ರೀಡಾ ಕಾರ್ಯದರ್ಶಿ ರೋಹಿತ್ ಶೆಟ್ಟಿ ಉಪಸ್ಥಿತರಿದ್ದರು.

ನಿಧಿಶಾ ಶೆಟ್ಟಿ ಸ್ವಾಗತಿಸಿದರು,ಉದಯ ಕುಮಾರ್ ಶೆಟ್ಟಿ ವಂದಿಸಿದರು, ಪುನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಶೆಟ್ಟಿ , ಶ್ರೇಯಸ್ ಅಂಕದಲ,ಸಹನಾ ಎಂ ಶೆಟ್ಟಿ ನರ್ವಲ್ದಡ್ಡ,  ಅದ್ವಿತಾ ಶೆಟ್ಟಿ  ಮರಮ್ಮ ,ಸಮೀಕ್ಷಾ ಶೆಟ್ಟಿ, ಅಕ್ಷತಾ ರೈ , ಸಹನಾ ಶೆಟ್ಟಿ ಪಣೆಕಲ ಸಹಕರಿಸಿದರು. ಬಹುಮಾನ ಒಟ್ಟು 6 ತಂಡಗಳು ಪಾಲ್ಗೊಂಡಿದ್ದ ಈ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾಟದಲ್ಲಿ ಕಾಡಬೆಟ್ಟು ಗ್ರಾಮ ಪ್ರಥಮ ಹಾಗೂ  ಮೂಡುಪಡುಕೋಡಿ ಗ್ರಾಮ ದ್ವಿತೀಯ ಸ್ಥಾನ ಪಡೆಯಿತು.
ಹಾಗೆಯೇ ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಇರ್ವತ್ತೂರು ಗ್ರಾಮ ಪ್ರಥಮ, ಮೂಡುಪಡುಕೋಡಿ ದ್ವಿತೀಯ ಹಾಗೂ ಕಾಡಬೆಟ್ಟು ತೃತೀಯ ಸ್ಥಾನ ಪಡೆಯಿತು.

By suddi9

Leave a Reply

Your email address will not be published. Required fields are marked *