ಬಂಟ್ವಾಳ : ತಾಲೂಕಿನಲ್ಲಿ ಕುಡಿಯುವ ನೀರು ಪೂರೈಕೆಯನ್ನು ಪ್ರಥಮ ಆದ್ಯತೆಯ ನೆಲೆಯಲ್ಲಿ ಮಾಡಬೇಕು, ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ  ಸಂವಹನ ನಡೆಸಿ ಬಗೆಹರಿಸಿಕೊಂಡು ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿ‌ ಅವರು ಅಧಿಕಾರಿಗಳಿಗೆ ಸೂಚಿಸಿದರು

ಸೋಮವಾರ ಬಂಟ್ವಾಳ ತಾ.ಪಂ.ನ ಎಸ್ ಜಿಎಸ್ ವೈ ಸಭಾಂಗಣದಲ್ಲಿ ಕ್ಷೇತ್ರದ ವ್ಯಾಪ್ತಿಯ ಗ್ರಾ.ಪಂ. ವ್ಯಾಪ್ತಿಯಲ್ಲಿ  ತುರ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪರೀಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ರೀತಿಯ ಉದಾಸೀನ ತೋರದೆ ಕಾರ್ಯ ಪ್ರವೃತ್ತರಾಗಬೇಕಲ್ಲದೆ ಜಲಜೀವನ್ ಮಿಷನ್, ಬಹುಗ್ರಾಮ ಯೋಜನೆ ಸಮಸ್ಯೆಯಿಂದ ನೀರಿನ ಲಭ್ಯತೆಯಲ್ಲಿ  ಉಂಟಾಗಿರುವ ಅಡಚಣೆ ಕುರಿತು  ವರದಿ ನೀಡುವಂತೆಯು ಅಧಿಕಾರಿಗಳುಗೆ ಸೂಚಿಸಿದರು.
ತಾಲೂಕಿನ ಪ್ರತಿಯೊಂದು ಗ್ರಾಮಾಡಳಿತ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ ಶಾಸಕ ರಾಜೇಶ್ ನಾಯ್ಕ, ನೀರಿನ ವಿಚಾರದಲ್ಲಿ ಯಾವುದೇ ಕೊರತೆಯಾಗದಂತೆ ಹಾಗೂ ಲಭ್ಯ ಅನುದಾನ ಬಳಸಿಕೊಂಡು ತುರ್ತು ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದರು.
ಬಂಟ್ವಾಳ ತಹಸೀಲ್ದಾ‌ರ್ ಮಂಜುನಾಥ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್‌ ಕುಮಾ‌ರ್, ಗ್ರಾಪಂ ಆಡಳಿತಾಧಿಕಾರಿಗಳು, ವಿವಿಧ ಇಲಾಖಾಧಿಕಾರಿಗಳು ಆಗಮಿಸಿ ಪೂರಕ ಮಾಹಿತಿ ನೀಡಿದರು.
 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಪೈಪ್ ಲೈನ್ ಗಳು ಒಡೆದು ಗೋಳ್ತಮಜಲು, ಬಾಳ್ತಿಲ ಸಹಿತ ಕೆಲವು ಗ್ರಾ.ಪಂ.ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ಪಿಡಿಒಗಳು ಶಾಸಕರ ಗಮನಕ್ಕೆ ತಂದರು.ಈ ಬಗ್ಗೆ ಹೆದ್ದಾರಿ ಇಲಾಖಾಧಿಕಾರಿಗಳನ್ನು ಕರೆಸಿ ಸಭೆ ನಡಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದರಲ್ಲದೆ ಉಳಿದಂತೆ ಸಮಸ್ಯೆಗಳಿದ್ದರೆ ಜಲಜೀವನ್ ಮಿಷನ್ ಮತ್ತು ಮೆಸ್ಕಾಂ ಅಧಿಕಾರಿಗಳು ಹಾಗೂ ಇಒ ಅವರು ತಹಸೀಲ್ದಾ‌ರ್ ನೇತೃತ್ವದಲ್ಲಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವಂತೆ ಶಾಸಕರು ಸೂಚಿಸಿದರು.
ಜಕ್ರಿಬೆಟ್ಟಿನಿಂದ ಸಂಗಬೆಟ್ಟುವಿಗೆ ನೀರು:
ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟುವಿನಲ್ಲಿ  ಡ್ಯಾಂ ನಿರ್ಮಾಣವಾದ ಬಳಿಕ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ  ಕುಡಿಯುವ ನೀರಿಗೆ ಸಮಸ್ಯೆ ಇಲ್ಲ, ಬಂಟ್ವಾಳದಿಂದಲೇ ಮಂಗಳೂರು ,ಉಳ್ಳಾಲದ ಜನತೆಗೂ ಅಗತ್ತ ಬಿದ್ದಲ್ಲಿ ಇಲ್ಲಿಂದ ನೀರು ಪೂರೈಕೆ ಮಾಡಲಾಗುತ್ತಿದೆ.ಹಿಂದೆಲ್ಲಾ ನೀರಿಗಾಗಿ ಸಮಸ್ಯೆ ಇದ್ದುದನ್ನು ನೆನಪಿಸಿದ ಶಾಸಕ ರಾಜೇಶ್ ನಾಯ್ಕ್ ಸಂಗಬೆಟ್ಟು ವ್ಯಾಪ್ತಿಯ ಕೆಲ ಭಾಗಗಳಿಗೆ ಹೊರತು ಪಡಿಸಿದರೆ ನೀರಿನ ಸಮಸ್ಯೆ ಕಡಿಮೆ ಇದ್ದು,ಪ್ರಸ್ತುತ ವಿತರಣಾ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ ಎಂದರು.
ಜಕ್ರಿಬೆಟ್ಟು ಡ್ಯಾಂ ನಿಂದ ನೀರಿನ ಸಮಸ್ಯೆ ಇರುವ ಸಂಗಬೆಟ್ಟು ವ್ಯಾಪ್ತಿಯ ಕೆಲ ಭಾಗಗಳಿಗೆ ನೀರು ಪೂರೈಸುವ ನಿಟ್ಟಿನಲ್ಲಿ ಸಾಧ್ಯತೆಯನ್ನು ಪರಿಶೀಲಿಸಿ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸುವಂತೆ ಇಂಜಿನಿಯರ್ ಗಳಿಗೆ ಶಾಸಕರು ಸೂಚಿಸಿದರು.
ಪಲ್ಗುಣಿ ನದಿಯಲ್ಲಿ‌ನೀರು ಬತ್ತಿ ಹೋಗಿದ್ದರಿಂದ ಸಂಗಬೆಟ್ಟು ಪರಿಸರದ ಕೆಲ ಭಾಗದಲ್ಲಿ ನೀರಿನ ಸಮಸ್ಯೆಯಿರುವುದನ್ನು ಸಭೆಯ ಗಮನಸೆಳೆಯಲಾಯಿತು.
ಇದಕ್ಕೆ ಪ್ರತಿಕ್ರೊಯಿಸಿದ ಶಾಸಕರು ವಿದ್ಯುತ್ ಉತ್ಪಾದನಾ ಘಟಕದಿಂದಾಗಿ ನೀರಿನ ಲಭ್ಯತೆ ಕಡಿಮೆಯಾಗಿದೆ.ಇಂತಹ ಸಂದರ್ಭದಲ್ಲಿ ಈ ಘಟಕಗಳಿಗೆ ಅವಕಾಶ ನೀಡಬಾರದೆಂಬ ನಿಯಮ ಇದೆ.ಈ ಹಿಂದೆ‌ ನೀರು ಬತ್ತಿಹೋದಾಗ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿದ್ದೆ.ಆಗಲು ವಿದ್ಯುತ್ ಘಟಕದ ವಿರುದ್ದ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಕನಿಷ್ಠ ಅವರಿಗೆ ನೋಟೀಸು ಕೂಡ ಜಾರಿ ಮಾಡಿರಲಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಕೇಪು ವಸತಿ ಶಾಲೆ ನೀರಿನ ಸಮಸ್ಯೆ ಎದುರಿಸುತ್ರಿರುವ ಬಗ್ಗೆ ಪಿಡಿಒ ಅವರು ಸಭೆಯ ಗಮನಸೆಳೆದರು.ಬದಲಿ ವ್ಯವಸ್ಥೆ ಕಲ್ಪಿಸುವಂತೆ ಶಾಸಕರು ಸೂಚಿಸಿದರು.
ಮುಂಜಾಗ್ರತಾ ಕ್ರಮ ಕೈಗೊಳ್ಳಿ;
ಮಳೆಗಾಲವು ನಮ್ಮ ಮುಂದಿದ್ದು,ಅಪಾಯಕಾರಿ ಮರ,ಗೆಲ್ಲುಗಳ ತೆರವು ,ನೀರು ಹರಿಯುವ ತೋಡಿನ ಹೂಳು ಎತ್ತವುದು,ಸ್ವಚ್ಚತೆಯ ಬಗ್ಗೆಯು ಹೀಗಿಂದಿಗಲೇ ಕ್ರಮಕೈಗೊಳುವುದು ಸೇರಿದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗುವಂತೆ ಶಾಸಕ ರಾಜೇಶ್ ನಾಯ್ಕ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಲೆ,ಅಂಗನವಾಡಿಗಳಿಗೆ ರಜೆ ಇರುವುದರಿಂದ ಅವುಗಳ ಸಣ್ಣಪುಟ್ಟು ದುರಸ್ತಿ ,ನೀರಿನ ಟ್ಯಾಂಕ್ ಗಳನ್ನು‌ ಸ್ವಚ್ಚಗೊಳಿಸಿಡುವಂತೆ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಚ್ಚಿನ್ ಕುಮಾರ್ ಸೂಚಿಸಿದರು.
ವಿವಿಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಪಂ ವ್ಯಾಪ್ತಿಗಳಲ್ಲಿನ ಸಮಸ್ಯೆಗಳ ಕುರಿತು ಗಮನ ಸೆಳೆದರು.ಗ್ರಾ.ಪಂ.ಗಳ ಆಡಳಿತಾಧಿಕಾರಿಗಳು ಹಾಜರಿದ್ದರು

By suddi9

Leave a Reply

Your email address will not be published. Required fields are marked *