ಬಂಟ್ವಾಳ: ಹೈದರಾಬಾದಿನ ಇಂಡಿಯನ್ ಸ್ಕೂಲ್ ಆಫ್ ಬುಸಿನೆಸ್ ಸಂಸ್ಥೆಯವರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ನಡೆಯುತ್ತಿರುವ   ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ ಪಾನಮುಕ್ತರಾದ ನವಜೀವನ ಸಮಿತಿ ಸದಸ್ಯರ ಸಂದರ್ಶನ ಕಾರ್ಯಕ್ರಮ ಮಂಗಳವಾರ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ಇದರ  ಯೋಜನಾ ಕಚೇರಿಯ ಉನ್ನತಿ ಸೌಧದಲ್ಲಿ ನಡೆಯಿತು.

ಐ ಎಸ್ ಬಿ ಸಂಶೋಧನಾ ಸಂಸ್ಥೆಯ ಸಹ ನಿರ್ದೇಶಕರಾದ  ಆನಂದ್ ಎಸ್ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜನಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿ ಪ್ರಾದೇಶಿಕ ನಿರ್ದೇಶಕರಾದ  ವಿವೇಕ್ ವಿ ಪಾಯಸ್ ರವರು ಮಾರ್ಗದರ್ಶನ ನೀಡಿದರು.

ಐ ಎಸ್ ಬಿ ಸಂಸ್ಥೆಯ ಚಂದ್ರಕಲಾ, ಸಿದ್ಧಾರ್ಥ್, ಅರ್ಜುನ್, ಅಖಿಲ್, ಎಮ್ ಐ ಎಸ್ ಯೋಜನಾಧಿಕಾರಿ ಪ್ರೇಮನಾಥ್, ಕೇಂದ್ರ ಕಚೇರಿ ಯೋಜನಾಧಿಕಾರಿಗಳಾದ ನಿಖಿಲೇಶ್ ಮಹೇಶ್, ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ ಉಪಸ್ಥಿತರಿದ್ದರು

ಮದ್ಯವರ್ಜನ ಶಿಬಿರಕ್ಕೆ ಸೇರಿ ಕುಡಿತ ಬಿಟ್ಟ ವಿಚಾರದ ಬಗ್ಗೆ ಸಂಶೋಧನಾ ಕಾರ್ಯವು ನಡೆಯುತ್ತಿದ್ದು  ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಪಟ್ಟ   ನವ ಜೀವನ ಸಮಿತಿ ಸದಸ್ಯರ ಹಾಗೂ ಅವರ ಕುಟುಂಬದ ಸಂದರ್ಶನವನ್ನು  ಐ ಎಸ್ ಬಿ ಸಂಸ್ಥೆಯ ಅಧಿಕಾರಿಗಳು  ನೆರವೇರಿಸಿ ಮಾಹಿತಿ ಪಡೆದುಕೊಂಡರು. 

By suddi9

Leave a Reply

Your email address will not be published. Required fields are marked *