ಬಂಟ್ವಾಳ : ತಾಲೂಕಿನ ಬಾಳ್ತಿಲ ಗ್ರಾಮದ ಕಂಟಿಕ  ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಾಂಸ್ಕೃತಿಕ ಕಲರವ  2026 ಹಾಗೂ ಯಕ್ಷಗಾನ  ಕಾರ್ಯಕ್ರಮ  ಶನಿವಾರ ಸಂಜೆ ಜರಗಿತು.ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸೌಮ್ಯಶ್ರೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಲ್ಲಡ್ಕ ಕೇಟಿ ಹೋಟೆಲ್ ಲಕ್ಷ್ಮಿ ಗಣೇಶ್ ಮಾಲಕಿ ಪದ್ಮಾವತಿ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ನಮ್ಮ ಆಚರಣೆ ಸಂಸ್ಕೃತಿ ಕಲೆಗಳು  ಮಾಯವಾಗುತ್ತಿರುವ ಈ  ಸಂದರ್ಭದಲ್ಲಿ  ಕಿರಿಯ ಪ್ರಾಥಮಿಕ ಮಕ್ಕಳಿಗೆ ತರಬೇತಿ ನೀಡಿ  ಯಕ್ಷಗಾನ ದಂತ ಕಲೆಯನ್ನು ಪ್ರದರ್ಶಿಸಿದ  ಶಾಲಾ ಮುಖ್ಯ ಶಿಕ್ಷಕಿ ಚೇತನ ಕುಮಾರಿಯವರ ಕಲಾ ಆಸಕ್ತಿ  ಭಾಇನಂದನೀಯವಾಗಿದೆ.
  ಶಿಕ್ಷಕರ ಸಂಘದ ಪದಾಧಿಕಾರಿ ಸಂದೇಶ್ ಎಂ ಎಸ್ ದಿಕ್ಸೂಚಿ ಭಾಷಣಗೈದರು.
  ಇದಕ್ಕು ಕಸಂಪ್ರಬೈಲು ಮೊದಲು ಶ್ರೀ ಉಲ್ಲಾಳ್ತಿ ಭಜನಾ ಮಂಡಳಿಯಿಂದ ಭಜನಾ  ಸಂಕೀರ್ತನೆ ಜರಗಿತು.
ಈ ಸಂದರ್ಭದಲ್ಲಿ  ಶಾಲಾ ಮಕ್ಕಳಿಗೆ  ಯಕ್ಷಗಾನ ತರಬೇತಿ ನೀಡಿದ ಅಲೆತ್ತೂರು ನರಸಿಂಹ ಮಯ್ಯರವರನ್ನು ಸನ್ಮಾನಿಸಲಾಯಿತು.
ಕಲಿಕಾ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳು, ಮಕ್ಕಳ ಪೋಷಕರು, ಶಾಲಾ ಹಿರಿಯ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶಾಲೆಗೆ  ಸಹಕರಿಸಿದವರನ್ನು ಗುರುತಿಸಿ ಸ್ಮರಣೆಕೆಯನ್ನಿತ್ತು ಗೌರವಿಸಲಾಯಿತು

ನರಿಕೊಂಬು ವಿವೇಕ ಜಾಗೃತ ಬಳಗ ಅಧ್ಯಕ್ಷ ಜಯಲಕ್ಷ್ಮಿ,ಗ್ರಾಮದ ಹಿರಿಯರಾದ ಮೋಹನ ಸಫಲ್ಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಧವ,ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಾದವ, ಮೊದಲಾದವರು ಉಪಸ್ಥಿತರಿದ್ದರು .
ನಿರೀಕ್ಷಾ ಅಮೃತ ಪಾವನಿ ಪ್ರಾರ್ಥಿಸಿ, ಶಾಲಾ ಮುಖ್ಯ ಶಿಕ್ಷಕಿ ಚೇತನ ಕುಮಾರಿ ಸ್ವಾಗತಿಸಿ,  ಶಿಕ್ಷಕಿ ಮೋನಿಷ ವಂದಿಸಿದರು.  ಶಿಕ್ಷಕಿ ಜಯಂತಿ ಕಾರ್ಯಕ್ರಮ ನಿರೂಪಿಸಿದರು.
, ಮಾಜಿ ಅಧ್ಯಕ್ಷ ರಾಜೇಶ್, ಮಾಜಿ ಪಂಚಾಯತ್ ಸದಸ್ಯ ರಾಜೇಶ್.  ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರುಗಳು ಸಹಕರಿಸಿದರು.‌ನಂತರ ,ಮಕ್ಕಳಿಂದ “ಶ್ರೀದೇವಿ ವೈಷ್ಣವಿ ಮಹಾತ್ಮೆ”  ಯಕ್ಷಗಾನ ಹಾಗೂ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ, ಶಾಲಾ ಮಕ್ಕಳಿಂದ, ಹಿರಿಯ ವಿದ್ಯಾರ್ಥಿಗಳಿಂದ   ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನ ಗೊಂಡಿತು.

By suddi9

Leave a Reply

Your email address will not be published. Required fields are marked *