ಪೊಳಲಿ:ಜಾತ್ರಾ ಸಂಭ್ರಮದಲ್ಲಿರುವ ಪೊಳಲಿಪೊಳಲಿಯ ಶ್ರೀ ರಾಜರಾಜೇಶ್ವರೀ ದೆರವಸ್ಥಾನದ ಮೂರನೇ ಚೆಂಡಿನ ದಿನದಂದು ಮಹಾರಾಷ್ಟ್ರದ ಪನ್ವೆಲ್ ನ ಬಿಜೆಪಿ ಶಾಸಕರಾದ ಪ್ರಶಾಂತ್ ಠಾಕೂರ್ ರವರು ಭೇಟಿ ನೀಡಿದರು ದೇವರದರ್ಶನ ಪಡೆದ ಶಾಸಕರಿಗೆ ದೇವಳದ ಪ್ರಸಾದವನ್ನಿತ್ತರು.


ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ರವರು ಶಾಸಕ ಪ್ರಸಾಂತ್ ಠಾಕೂರ್ ಅವರಿಗೆ ಕ್ಷೇತ್ರದ ಹಿನ್ನಲೆಯನ್ನು ವಿವರಿಸಿದರಲ್ಲದೆ ಕ್ಷೇತ್ರದ ವತಿಯಿಂದ ಗೌರವಿಸಿದರು.
ಪನ್ವೆಲ್ ನ ನಗರ ಸೇವಕರಾದ ದಳಂದಿಲ ಸಂತೋಷ್ ಶೆಟ್ಟಿ, ಉಳಿಪಾಡಿಗುತ್ತು ಸುಭಾಸ್‌ಚಂದ್ರ ನಾಯ್ಕ್ ಬಿಜೆಪಿ ಬಂಟ್ವಾಳ ಮಂಡಲದ ಪ್ರ.ಕಾರ್ಯದರ್ಶಿ ಸುದರ್ಶನ್ ಬಜ,ಪವನ್ ಕುಮಾರ್ ಮೊದಲಾದವರಿದ್ದರು.

