ಕಂಬಳ ಕ್ರೀಡೆ ಮಾತ್ರವಲ್ಲ, ಅದು ಧಾರ್ಮಿಕ ಆಚರಣೆ : ಡಿ. ಕೆ. ಸುರೇಶ್

ಗುರುಪುರ : ಇದೊಂದು ಜಾತ್ಯತೀತ ಕಂಬಳವಾಗಲು ಇನಾಯತ್ ಅಲಿ ಕಾರಣರಾಗಿದ್ದಾರೆ. ಕಂಬಳದ ಮೂಲಕ ತುಳುನಾಡಿನ ಸಂಸ್ಕೃತಿ, ಧರ್ಮ ಮತ್ತು ಪರಂಪರೆ ಉಳಿಸುವ ಕೆಲಸ ನಡೆಯುತ್ತಿದೆ. ಕಂಬಳವು ಕ್ರೀಡೆ ಮಾತ್ರವಲ್ಲ, ಅದು ಧಾರ್ಮಿಕ ಆಚರಣೆ. ನಗರೀಕರಣದ ಈ ಸಂದರ್ಭದಲ್ಲಿ ಇಂತಹ ಜಾನಪದ ಕಲೆಗಳು ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಮತ್ತೊಂದು ಪೀಳಿಗೆಗ ದಾಟಲು ಸಾಧ್ಯ. ಹಾಗಾಗಿ ಯುವಪೀಳಿಗೆ ಇದರಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು. ಮುಂದೊAದು ದಿನ ಕಂಬಳ ಐಪಿಎಲ್ ಮಾದರಿಯಲ್ಲಿ ನಡೆಯುವ ಎಲ್ಲ ಲಕ್ಷಣ ಕಂಡು ಬರುತ್ತಿದೆ. ಜೊತೆಗೆ ರೈತರಿಗೆ ಶಕ್ತಿ ನೀಡುವ ದೆಸೆಯಲ್ಲಿ ಎಲ್ಲರೂ ನಂದಿನಿ ಪ್ರಾಡಕ್ಟ್ಗೆ ಬೆಂಬಲ ನೀಡಬೇಕು ಎಂದು ಬಮುಲ್ ಬೆಂಗಳೂರು ಅಧ್ಯಕ್ಷ, ಮಾಜಿ ಸಂಸದ ಡಿ. ಕೆ. ಸುರೇಶ್ ಹೇಳಿದರು.

ಮೂಳೂರು-ಅಡ್ಡೂರು ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಸ್ವಾಗತಿಸಿ ಪ್ರಸ್ತಾವಿಸಿ ೧೦೦ ಬಡ ಕುಟುಂಬಗಳ ಹೆಣ್ಣು ಮಕ್ಕಳ ಮದುವೆ ಮತ್ತು ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ತಲಾ ೨೫ ಸಾವಿರ ರೂ.(ಒಟ್ಟು ೨೫ ಲಕ್ಷ ರೂ) ನೆರವು ನೀಡಿದರು.

ಸಭೆಯಲ್ಲಿ ವಿಧಾನಸಭಾಧ್ಯಕ್ಷ ಯು. ಟಿ. ಖಾದರ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಶ್ರೀ ಕ್ಷೇತ್ರ ಕುದ್ರೋಳಿ ಕೋಶಾಧಿಕಾರಿ ಪದ್ಮರಾಜ ಪೂಜಾರಿ, ಗಿರೀಶ್ ಆಳ್ವ, ಕೀರ್ತಿ ಗಣೇಶ್, ಜಗದೀಶ ಅಧಿಕಾರಿ, ಕಂಬಳ ಸಮಿತಿಯ ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್, ಸ್ಥಾಪಕಾಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು, ಕಾರ್ಯಧ್ಯಕ್ಷ ಜಗದೀಶ ಶೆಟ್ಟಿ ಮಾಣಿಬೆಟ್ಟುಗುತ್ತು, ಪ್ರಧಾನ ಕಾರ್ಯದರ್ಶಿ ಯಶವಂತ ಶೆಟ್ಟಿ ಬೆಳ್ಳೂರುಗುತ್ತು, ಸಮಿತಿಯ ಸರ್ವ ಪದಾಧಿಕಾರಿಗಳು ಹಾಗೂ ಸದಸ್ಯರು, ಕಂಬಳಾಭಿಮಾನಿಗಳು ಇದ್ದರು. ಚೇತನ್ ಶೆಟ್ಟಿ ಅವರು ನಿರೂಪಿಸಿದರು. ಈ ಬಾರಿ ಗುರುಪುರ ಕಂಬಳಕ್ಕೆ ಒಟ್ಟು ೧೧೭ ಜೋಡಿ ಕೋಣಗಳು ಬಂದಿವೆ

By suddi9

Leave a Reply

Your email address will not be published. Required fields are marked *