ಬಂಟ್ವಾಳ:  ಬಹುಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರ ಧಾರವಾಡ, ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ಹಾಗೂ ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನ, ಕರ್ನಾಟಕ (ರಿ.) ಇವುಗಳ ಸಹಯೋಗದೊಂದಿಗೆ ” ಭಾರತೀಯ ಜ್ಞಾನ ಪರಂಪರೆಯ ಘಟಕದ ಉದ್ಘಾಟನಾ ಕಾರ್ಯಕ್ರಮವು ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ನಡೆಸಲಾಯಿತು. 

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ದೀಪಪ್ರಜ್ವಲನೆಯ ಮೂಲಕ ಶ್ರೀರಾಮ ಪದವಿ ವಿಭಾಗದ  ಘಟಕವನ್ನು ಉದ್ಘಾಟಿಸಿ ಮಾತನಾಡಿ, ಭಾರತದ ಜ್ಞಾನ ಪರಂಪರೆಯ ವಿಚಾರಗಳನ್ನು ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳುವುದು ಇಂದಿನ  ಅಗತ್ಯವಿದೆ, ಇಂತಹ ಜ್ಞಾನ ಪರಂಪರೆ ನಮ್ಮ ಹೆಮ್ಮೆಯಾಗಿದೆ.ಆಧುನಿಕ ವಿದ್ಯಾಭ್ಯಾಸಕ್ಕೆ ಒಗ್ಗಿ ಹೋಗಿದ್ದರೂ ಪ್ರತಿಯೊಬ್ಬನೂ ಭಾರತದ ಜ್ಞಾನ ಪರಂಪರೆಯ ಕಡೆಗೆ ತಿರುಗಿ ನೋಡಬೇಕಾದ ಅನಿವಾರ್ಯತೆ ಇದೆ ಎಂದರು.
ಬಹುಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರದ ಸಹಾಯಕ  ಪ್ರತೀಕ್ ಮಾಳಿ ಭಾರತೀಯ ಜ್ಞಾನ ಪರಂಪರೆಯ ಮಹತ್ವವನ್ನು ತಿಳಿಸಿದರು.
ಬಳಿಕ ಉಡುಪಿಯ ಆಸೆಮ್ಸ್ ಕಾಲೇಜಿನ ಪ್ರಾಂಶುಪಾಲರು, ಪ್ರಖ್ಯಾತ ಯಕ್ಷಗಾನ ಕಲಾವಿದರು, ಪ್ರಸಂಗಕರ್ತರಾದ ಪ್ರೊ. ಡಾ. ಪವನ್ ಕಿರಣಕೆರೆ ಅವರು “ಭಾರತೀಯ ಜ್ಞಾನಪರಂಪರೆ- ಪ್ರಾಚೀನತೆಯಿಂದ ಆಧುನಿಕತೆಯೆಡೆಗೆ” ಎಂಬ ವಿಷಯದ ಕುರಿತಾಗಿ ಉಪನ್ಯಾಸವಿತ್ತು, “ಭಾರತ” ಎಂಬ ಪದವೇ “ಜ್ಞಾನದಲ್ಲಿ ನಿರತ” ಎಂಬ ಅರ್ಥವನ್ನು ಕೊಡುತ್ತದೆ. ಇಂತಹ ಅರ್ಥಪೂರ್ಣ ಪದವನ್ನು ಮರೆತು ನಮ್ಮ ದೇಶವನ್ನು ಇಂಡಿಯಾ ಎಂದು ಕರೆಯುತ್ತಿರುವುದು ವಿಪರ್ಯಾಸ ಎಂದರು. ಭಾರತದ ಜ್ಞಾನವು ಅನಾದಿ ಕಾಲದಿಂದಲೇ ಅನಂತವಾಗಿದ್ದರೂ ಆಂಗ್ಲ ಸಂಸ್ಕೃತಿಯನ್ನೇ ಸರ್ವಸ್ವ ಎಂದು ತಿಳಿದು, ಪಾಶ್ಚಾತ್ಯ ದೇಶಗಳೇ ಮುಂದುವರಿದ ದೇಶಗಳೆಂದು ತಿಳಿದ ಭಾರತೀಯರೇ ಅತ್ಯಂತ ಮೂಢರು ಎಂದು ಹೇಳಿದ ಅವರು ಭಾರತದ ಜ್ಞಾನ ಪರಂಪರೆಯ ಅನೇಕ ವಿಚಾರಗಳನ್ನು ಸಭೆಯ ಮುಂದಿಟ್ಟರು.
 ವೇದಿಕೆಯಲ್ಲಿ  ಕಾಲೇಜಿನ ಉಪಪ್ರಾಂಶುಪಾಲರಾದ  ಸುಕನ್ಯಾ, ಘಟಕದ ಸಂಯೋಜಕರಾದ ಧನಂಜಯ ಉಪಸ್ಥಿತರಿದ್ದರು.
ಇತ್ತೀಚೆಗೆ ನಡೆದ ಐಎಎಸ್ ಸಂಬಂಧಿತ ಪರೀಕ್ಷೆಯಲ್ಲಿ ಕಾಲೇಜಿನಲ್ಲಿ ಅಗ್ರಶ್ರೇಣಿ ಪಡೆದ ಬಿಕಾಂ ವಿದ್ಯಾರ್ಥಿ ಲವನೀಶ್ ಅವರನ್ನು ಅಭಿನಂದಿಸಲಾಯಿತು. ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಸ್ವಾಗತಿಸಿ,ಪ್ರಸ್ತಾವನೆಗೈದರು.  ವಿದ್ಯಾರ್ಥಿ ಜಯಸೂರ್ಯ ಕಾರ್ಯಕ್ರಮ ನಿರೂಪಿಸಿದರು.  ಘಟಕದ ಸಂಯೋಜಕ ಧನಂಜಯ ವಂದಿಸಿದರು.

By suddi9

Leave a Reply

Your email address will not be published. Required fields are marked *