ಬಂಟ್ವಾಳ: ಹಿಂದೂ ಸಂಗಮ ಆಯೋಜನಾ ಸಮಿತಿ ಮೇರಮಜಲು ಇದರ ಅಶ್ರಯದಲ್ಲಿ ಕಳ್ಳಿಗೆ, ಕೊಡ್ಮಾಣ್, ಮೇರಮಜಲು ಗ್ರಾಮಗಳನ್ನೊಳಗೊಂಡ ಮೇರಮಜಲು ಮಂಡಲದ ಹಿಂದೂ ಸಂಗಮ ಕಾರ್ಯಕ್ರಮವು  ಕಳ್ಳಿಗೆ ಗ್ರಾಮದ ಪೆರಿಯೋಡಿಬೀಡು ಬಾಕಿಮಾರು ಗದ್ದೆಯಲ್ಲಿ ಭಾನುವಾ ನಡೆಯಿತು.
ವಿ.ಹಿಂ.ಪ ಮಂಗಳೂರು ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಸಾಣೂರು ದಿಕ್ಸೂಚಿ ಭಾಷಣಗೈದು,ಸಾವಿರಾರು ವರ್ಷಗಳ ಹೋರಾಟದ ಫಲವಾಗಿ ಹಿಂದೂ ಸಮಾಜದಲ್ಲಿ ಜಾಗೃತಿ ಉಂಟಾಗಿದೆ.ಹಿಂದೂ ಧರ್ಮ,  ಸಂಸ್ಕೃತಿ, ಪರಂಪರೆ, ಜೀವನ ಪದ್ಧತಿಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಹಿಂದುತ್ವ ಜಗತ್ತನ್ನು ಒಟ್ಟು ಮಾಡುವ ಕಾರ್ಯ ಮಾಡುತ್ತಿದೆ.ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಲಗಿರುವ ಹಿಂದೂ ಸಮಾಜವನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದೆ ಎಂದ ಅವರು  ದೇಶ ಜಗದ್ಗುರುವಾಗುವ ನಿಟ್ಟಿನಲ್ಲಿ ಸಮಸ್ತ ಹಿಂದೂ ಸಮಾಜ  ಒಗ್ಗಾಟಗಾಬೇಕಿದೆ ಎಂದರು.
ಬ್ರಹ್ಮಶ್ರೀ ಆನಂದ ಸಿದ್ಧಿಪೀಠಂ ಮತ್ತು ಶ್ರೀ ಲಕ್ಷಿ ಭೂವರಾಹ ಸ್ವಾಮಿ ಸಾಲಿಗ್ರಾಮ ಕ್ಷೇತ್ರದ ಡಾ. ಆನಂದ ಗುರೂಜಿ ಮಾತನಾಡಿ,ಎಲ್ಲರನ್ನು ಒಗ್ಗೂಡಿಸಿ ಹಿಂದೂ ಸಂಗಮದ ಮೂಲಕ  ಹಿಂದುತ್ವದ ವಿರಾಟ್  ಶಕ್ತಿ ಅನಾವರಣವಾಗಿದೆ, ಹಿಂದೂಗಳು ವಿಶಾಲವಾಗಿ ಬೆಳೆದ ಆಲದ ಮರ,  ಹಿಂದುತ್ವದ ವಿರುದ್ದ  ಮಾತಾನಾಡುವ ದಮ್ಮು ಯಾರಿಗೂ ಇಲ್ಲ ಎಂದರು.
ಸನಾತನ ಧರ್ಮಕ್ಕೆ ಅಳಿವಿಲ್ಲ,ನಾವೆಲ್ಲರೂ ಧರ್ಮ ಸಂಸ್ಕಾರದಲ್ಲಿ ನಡೆಯಬೇಕು, ತಾಯಂದಿರು ಸಂಸ್ಕಾರ ಕಲಿತು ಮಕ್ಕಳನ್ನು ಸಂಸ್ಕಾರ ವಂತರನ್ನಾಗಿ ಮಾಡಬೇಕು ಎಂದರು.
ಗೋವಿನತೋಟ ರಾಧಾಸುರಭಿ ಗೋಮಂದಿರ  ಭಕ್ತಿಭೂಷಣ್‌ದಾಸ್ ಪ್ರಭೂಜಿ,ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ದಿವಾಕರ ಪಂಬದಬೆಟ್ಟು, ಅರ್ಚಕರುಗಳಾದ ಹರಿಯಪ್ಪ ಕೋಟ್ಯಾನ್,  ಉಪೇಂದ್ರ ಮೂಲ್ಯ,ಬೀರಣ್ಣ ಆತರ್ ಬೆಂಜನಪದವು, ನವೀನ್‌ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಲಕ್ಷ್ಮೀಕಾಂತ್ ನಾಯಕ್ ಕೊಡ್ಮಾಣ್, ಹರೀಶ್ ಶೆಟ್ಟಿ ನಾಲದೆಗುತ್ತು, ರಾಮಪ್ಪ ಮೂಲ್ಯ ಕಾಪಿಕಾಡ್,ವಿದ್ಯಾಧರ ಅಬ್ಬೆಟ್ಟು,  ವಿಶ್ವನಾಥ ಪೂಜಾರಿ ದಾಸರಕೋಡಿ, ದೇವಪ್ಪ ಪಕ್ಕಳಪಾದೆ ಮೇರಮಜಲು, ಶಶಿಧರ್ ಬ್ರಹ್ಮರಕೂಟ್ಲು, ವಸಂತ ಬಡ್ಡೂರು ಉಪಸ್ಥಿತರಿದ್ದರು.
.ಡಾ.ಸ್ವಾತಿ ಕೊಡ್ಮಾಣ್ ಅವರು ಮಹಿಳೆಯರ ಪಾತ್ರದ ಬಗ್ಗೆ ವಿಷಯ ಮಂಡಿಸಿದರು.
ಬಂಟ್ವಾಳ ಹಿಂದೂ ಸಂಗಮ ಆಯೋಜನಾ ಸಮಿತಿಯ ಉಪಾಧ್ಯಕ್ಷ ಅನಿಲ್ ಪಂಡಿತ್ ಬ್ರಹ್ಮರಕೂಟ್ಲು ಪ್ರಸ್ತಾವನೆಗೈದರು.
ಡಹೇಮಂತ್ ದರಿಬಾಗಿಲು ಸ್ವಾಗತಿಸಿದರು, ಶಶಿಧರ ಕೊಡ್ಮಾಣ್  ವಂದಿಸಿದರು, ಮನಿಷಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕು ಮೊದಲು ಬ್ರಹ್ಮರಕೂಟ್ಲು ಶ್ರೀ ಬ್ರಹ್ಮ ಸನ್ನಿಧಿಯಿಂದ ಬೃಹತ್ ಶೋಭಾಯಾತ್ರೆ ನಡೆಯಿತು.ವಿವಿಧ ಕುಣಿತ ಭಜನಾ ತಂಡಗಳು ವಾದ್ಯಘೋಷಗಳು ಶೋಭಾಯಾತ್ರೆಗೆ ಮೆರಗು ನೀಡಿತು.ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. 
 
 
 
 
 

By suddi9

Leave a Reply

Your email address will not be published. Required fields are marked *