ಬಂಟ್ವಾಳ:  ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಆಡಳಿತ ಟ್ರಸ್ಟ್(ರಿ) ಮಾರ್ನಬೈಲು ಇದರ ಅಧ್ಯಕ್ಷರಾಗಿ ಎನ್.ಪುರುಷೋತ್ತಮ ಪೂಜಾರಿ ನಾಗನವಳಚ್ಚಿಲ್ ಅವರು ನಾಲ್ಕನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಇತ್ತೀಚೆಗೆ ನಡೆದ ಟ್ರಸ್ಟ್ ನ ವಾರ್ಷಿಕ ಮಹಾಸಭೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ.

 

ಗೌರವಾಧ್ಯಕ್ಷರಾಗಿ ಸಂಜೀವ ಗುರುಸ್ವಾಮಿ ಅಮ್ಟೂರು, ಕೃಷ್ಣ ಗುರುಸ್ವಾಮಿ ಮಾರ್ನಬೈಲು,
ಉಪಾಧ್ಯಕ್ಷರಾಗಿ ಯೋಗೀಶ್ ಗಟ್ಟಿ ನಂದಾವರ,ಗೌರವ ಸಲಹೆಗಾರರಾಗಿ  ಯಾದವ ಬಂಗೇರ ಕಂಚಿಲ,ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಕುಂದರ್ ಖಂಡಿಗ,ಜೊತೆ ಕಾರ್ಯದರ್ಶಿಯಾಗಿ ಸಂತೋಷ್ ಕೋಟ್ಯಾನ್ ದಾಸರಗುಡ್ಡೆ,ಲೆಕ್ಕ ಪರಿಶೋಧಕರಾಗಿ ವಿಶ್ವನಾಥ ಆಚಾರ್ಯ ದಾಸರಗುಡ್ಡೆ,ಕೋಶಾಧಿಕಾರಿಯಾಗಿ ನಾಗೇಶ್ ಕಾಪಿಕಾಡ್ ಹಾಗು 20 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆಗೊಳಿಸಲಾಗಿದೆ.


ಅದೇರೀತಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಮಾರ್ನಬೈಲು ಇದರಅಧ್ಯಕ್ಷರಾಗಿ ಸುರೇಶ್ ಕುಲಾಲ್ ಕಲ್ಲಾಡಿಗೋಳಿ ಅವರು ಆಯ್ಕೆಯಾಗಿದ್ದಾರೆ.ಉಳಿದಂತೆ ಉಪಾಧ್ಯಕ್ಷರಾಗಿ ಪ್ರಸನ್ನ ಆಚಾರ್ಯ ಮಾರ್ನಬೈಲು,
ಪ್ರಧಾನ ಕಾರ್ಯದರ್ಶಿಯಾಗಿ ನಿತಿನ್ ಕುಮಾರ್ ಮಾರ್ನಬೈಲು,ಜೊತೆ ಕಾರ್ಯದರ್ಶಿಯಾಗಿ ಸದಾಶಿವ ಪೂಜಾರಿ ಮಾರ್ನಬೈಲು,ಲೆಕ್ಕ ಪರಿಶೋಧಕರಾಗಿ ದಿಪ್ತೇಶ್ ಮಾರ್ನಬೈಲು ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *