ಬಂಟ್ವಾಳ: ಕೇಂದ್ರ ಸರ್ಕಾರದ ಯೋಜನೆ,ಸವಲತ್ತುಗಳನ್ನು  ಅರ್ಹ ಫಲಾನುಭವಿಗಳಿಗೆ  ತಲುಪಿಸುವಂತೆ ಕೆಲಸ ಮಾಡಿದರೆ ಗ್ರಾಮ ಅಭಿವೃದ್ಧಿಯಾಗುತ್ತದೆ.

ಎಲ್ಲರನ್ನೂ ಒಟ್ಟಾಗಿ ಸೇರಿಸಿಕೊಂಡು  ಕೊಂಡೊಯ್ಯುವ ಈ ಗ್ರಾಮ ಪಂಚಾಯತ್ ನ ಅಭಿವೃದ್ಧಿಕಾರ್ಯ ಜಿಲ್ಲೆಯ ಎಲ್ಲಾ ಪಂಚಾಯತ್ ಗಳಿಗೂ ಮಾದರಿಯಾಗಲಿ.ಪ್ರಧಾನಿ ಮೋದಿಯವರ ವಿಕಸಿತ ಭಾರತದ ಕಲ್ಪನೆಯ ಪ್ರಕಾರ ಅಭಿವೃದ್ಧಿ ಕೆಲಸ ಮಾಡುವ ಶಕ್ತಿಯನ್ನು ಮಾತೆ ಉಳ್ಳಾಲ್ತಿಯು ಅನುಗ್ರಹಿಸಲಿ ಎಂದು ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.


ಶನಿವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,ದ.ಕ.ಜಿಲ್ಲಾ ಪಂಚಾಯತ್,ಅನಂತಾಡಿ ಗ್ರಾಮ ಪಂಚಾಯತ್ ಭಾರತ್ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು
ಅಧ್ಯಕ್ಷತೆ ವಹಿಸಿ ಅನಂತಾಡಿ ಗ್ರಾಮಪಂಚಾಯತ್ ಅಭಿವೃದ್ಧಿ ಕಾರ್ಯವನ್ನು ‌ಶ್ಲಾಘಿಸಿ ಕಾರ್ಯಕರ್ತರನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ   ಸುಜಾತ ಎ., ಉಪಾಧ್ಯಕ್ಷೆ ಸಂಧ್ಯಾ ಕೆ, ಬಂಟ್ವಾಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಬಂಟ್ವಾಳ ಉಪವಿಭಾಗದ ಸಹ ಕಾರ್ಯನಿರ್ವಾಹಕ ಇಂಜಿನಿಯರ್ ತಾರಾನಾಥ ಸಾಲಿಯಾನ್  ಪಿ, ಉಳ್ಳಾಲ್ತಿ ದೈವಸ್ಥಾನದ ಅರ್ಚಕರಾದ ಶ್ರೀಕಾಂತ್ ಬನ್ನಿಂತಾಯ, ನೇರಳಕಟ್ಟೆ ಸೇವಾ ಸಹಕಾರಿ ವ್ಯವಸಾಯ ಬ್ಯಾಂಕ್ ನ ನಿರ್ದೇಶಕರಾದ ಸನತ್ ಕುಮಾರ್ ರೈ ತುಂಬೆಕೋಡಿ, ಸದಸ್ಯರುಗಳಾದ ಪುರಂದರ ಗೌಡ ಟಿ, ಕುಸುಮಾಧರ  ಗೌಡ ಟಿ, ರಶ್ಮಿ ಎನ್. ಎಸ್, ಶಶಿಕಲಾ  ಪೂಜಾರಿ  ಉಪಸ್ಥಿತರಿದ್ದರು.ನಿವೃತ್ತ ಕಾರ್ಯದರ್ಶಿ ಜಯರಾಮ್,   ನೂತನ ಕಟ್ಟಡದ ನಿರ್ಮಾಣಕ್ಕೆ ಸಹಕರಿಸಿದ ಪುಷ್ಪರಾಜ್ ಚೌಟ, ಸನತ್ ಕುಮಾರ್ ರೈ, ಗಣೇಶ್ ಪೂಜಾರಿ ಬಂಟ್ರಿಂಜ,ಸುಜಾತ ಎ, ತಾರಾನಾಥ ಸಾಲಿಯಾನ್, ಪದ್ಮನಾಭ ಅರೆಬೆಟ್ಟು , ರಜತ್, ಅತೀಶ್, ಅಶ್ವಿನ್, ನಾಗೇಶ್, ಜಯರಾಮ ಆರಂಗಳ, ವಿಶ್ವನಾಥ್ ಬೈಲಮೂಲೆ, ನಾರಾಯಣ ನಾಯ್ಕ, ಅರುಂಧತಿ, ಕಿರಣ್ ಹೆಗ್ಡೆ, ಮೋನಪ್ಪ ಗೌಡ ತಾಳಿಪಡ್ಪು,ವಂದನಾ ಪ್ರಿಯ ಹಾಗೂ ಪಂಚಾಯತ್ ನಲ್ಲಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು , ಮಾಜಿ ಸದಸ್ಯರು,  ಅಭಿವೃದ್ಧಿ ಅಧಿಕಾರಿಗಳು,  ಕಾರ್ಯದರ್ಶಿಗಳು, ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಅಧ್ಯಕ್ಷರು, ಸದಸ್ಯರು, ಪಿಡಿಒ, ಕಾರ್ಯದರ್ಶಿ,ಪಂಚಾಯತ್ ಗೆ ಸಂಬಂಧಿಸಿದ ವಿವಿಧ ವಿಭಾಗಗಳ ಸಿಬ್ಬಂದಿ ವರ್ಗದವರನ್ನು ಗೌರವಿಸಲಾಯಿತು.
                
ನಿಕಟಪೂರ್ವ ಅಧ್ಯಕ್ಷ ಗಣೇಶ್ ಕುಮಾರ್  ಬಂಟ್ರಿಂಜ ಸ್ವಾಗತಿಸಿದರು. ಅಭಿವೃದ್ಧಿ ಅಧಿಕಾರಿ ವಿಶ್ವನಾಥ ಬೈಲಮೂಲೆ ಪ್ರಸ್ತಾವಿಸಿದರು. ಪಂಚಾಯತ್ ಕಾರ್ಯದರ್ಶಿ ನಾರಾಯಣ ನಾಯ್ಕ ವಂದಿಸಿದರು. ವೆಂಕಟೇಶ ಮಾಸ್ತರ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.
ನರೇಗಾ ಯೋಜನೆಯಡಿ
ಸುಮಾರು ರು. 60ಲಕ್ಷ  ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದ್ದು ಸಂಸದರ ನಿಧಿಯಿಂದ 17 ಲಕ್ಷ,ಶಾಸಕರ ನಿಧಿಯಿಂದ 10ಲಕ್ಷ,ಎಂ.ಎಲ್ಸಿ.ನಿಧಿಯಿಂದ 5 ಲಕ್ಷ ಅನುದಾನವನ್ನು ಬಳಸಿಕೊಂಡು ಈ ಸುಂದರ ಕಟ್ಟಡ ನಿರ್ಮಾಣವಾಗಿದೆ ಎಂದು ಸ್ಥಳೀಯ ಮುಖಂಡ ಅನಂತಾಡಿ ಸನತ್ ಕುಮಾರ್ ಈ ಸಂದರ್ಭ ತಿಳಿಸಿದ್ದಾರೆ. 

By suddi9

Leave a Reply

Your email address will not be published. Required fields are marked *