ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ “ಗೀತಾ ಜಯಂತಿ ದಿನಾಚರಣೆಯನ್ನು” ಆಚರಿಸಲಾಯಿತು.

ಶ್ರೀರಾಮ ಪ್ರೌಢಶಾಲೆ ಸಂಸ್ಕೃತ ಅಧ್ಯಾಪಕ ಜಯರಾಮ ಅವರು ಮಾತನಾಡಿ,ಶ್ರೀಕೃಷ್ಣನು ಯುದ್ಧದ ಆರಂಭದಲ್ಲಿ ಅರ್ಜುನನಿಗೆ ಭಗವದ್ಗೀತೆಯನ್ನು ಭೋದಿಸಿದ ದಿನವನ್ನು ಗೀತಾ ಜಯಂತಿಯನ್ನಾಗಿ ಆಚರಿಸುತ್ತದೆ. ಭಗವದ್ಗೀತೆ ಎಲ್ಲದರ ತಳಪಾಯವಾಗಿದ್ದು, ವಿದ್ಯಾರ್ಥಿಯಾದವನು ಪ್ರತಿದಿನವು ಭಗವದ್ಗೀತೆಯನ್ನು ಪಠಿಸುವುದರಿಂದ ಉಚ್ಚಾರ ಸ್ಪಷ್ಟತೆ, ಏಕಾಗ್ರತೆಯಿಂದ ವಿದ್ಯೆಯಲ್ಲಿ ಯಶಸ್ಸು ಸಾಧ್ಯ ಎಂದು ಹೇಳಿದರು.

ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ವೇದಿಕೆಯಲ್ಲಿದ್ದರು. ಇದೇ ವೇಳೆ ಎಲ್ಲಾ ಮಕ್ಕಳು ಒಕ್ಕೊರಲಿನಿಂದ ಭಗವದ್ಗೀತೆಯ ೧೨ನೇ ಅಧ್ಯಾಯವನ್ನು ಪಠಿಸಿದರು ನಂತರ ಗೀತೋಪದೇಶದ ಸಂದರ್ಭವನ್ನು ಕಿರುಪ್ರಹಸನದ ಮೂಲಕ ಪೂರ್ವಗುರುಕುಲ ಹಾಗೂ ಹಿರಿಯ ವಿಭಾಗದ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ವಿದ್ಯಾರ್ಥಿಗಳಾದ ಪುಣ್ಯಶ್ರೀ ಸ್ವಾಗತಿಸಿ, ಸ್ವಸ್ತಿಕ್ ಎಸ್ ಕಾರ್ಯಕ್ರಮ ನಿರೂಪಿಸಿ, ರವಿಕಾಂತ್ ವಂದಿಸಿದರು.
