ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಎನ್ ಎಸ್ ಎಸ್  ಹಾಗೂ ರೆಡ್‌ಕ್ರಾಸ್ ಘಟಕದ ವತಿಯಿಂದ  ಮಂಗಳೂರಿನ ಕೆಎಂಸಿ  ಆಸ್ಪತ್ರೆಯ ಸಹಯೋಗದಲ್ಲಿ, ಪಾಂಚಜನ್ಯ ಹಿರಿಯ ವಿದ್ಯಾರ್ಥಿಗಳ ಸಂಘ,ಕಲ್ಲಡ್ಕ ರಿಕ್ಷಾ ಚಾಲಕ- ಮಾಲಕರ ಸಂಘದ ಸಹಕಾರದಲ್ಲಿ   ಬೃಹತ್ ರಕ್ತದಾನ ಶಿಬಿರ ಕಲ್ಲಡ್ಕ ಶ್ರೀರಾಮ ಡಿಗ್ರಿ ಕಾಲೇಜಿನಲ್ಲಿ ನಡೆಯಿತು.

 ಮಂಗಳೂರು ಕೆಎಂಸಿ ಅತ್ತಾವರ ಇದರ ತಾಂತ್ರಿಕ ತಜ್ಞರಾದ  ರಾಘವೇಂದ್ರ ಅವರು ದೀಪ ಬೆಳಗಿಸಿ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ರಕ್ತದಾನದ ಮಹತ್ವವನ್ನು ತಿಳಿಸಿದರು.

 ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಇನ್ನೊಬ್ಬರ ಬದುಕಿಗಾಗಿ ತನ್ನ ಬದುಕಿನ ಒಂದು ಭಾಗವನ್ನು ಕೊಡುವ ಪುಣ್ಯದ ಕೆಲಸವನ್ನು ಮಾಡಿ ರಕ್ತದ ಕೊರತೆಯನ್ನು ನೀಗಿಸಲು ಮುಂದಾಗಬೇಕು ಎಂದರು. 

 ಪಾಂಚಜನ್ಯ ಹಿರಿಯ ವಿದ್ಯಾರ್ಥಿಸಂಘದ ಅಧ್ಯಕ್ಷ ರಾಜೇಶ್ ನರಿಂಗಾಣ,ಕಲ್ಲಡ್ಕ ಶ್ರೀರಾಮ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ ಕುಲ್ಯಾರ್, ರಿಕ್ಷಾ ಚಾಲಕ-ಮಾಲಕರ ಸಂಘದ ಸದಸ್ಯ ಜಯಂತ ಸುಧೆಕಾರ್ ಅವರು ಅಭ್ಯಾಗತರಾಗಿ ಭಾಗವಹಿಸಿದ್ದರು. 

ಬಿಎ ವಿದ್ಯಾರ್ಥಿನಿ ಕು. ಅಕ್ಷತ ಲಕ್ಷ್ಮೀ ಪ್ರಾರ್ಥಿಸಿದರು.

 ಕಾಲೇಜು ಪ್ರಾಂಶುಪಾಲರಾದ ಕೃಷ್ಣ ಪ್ರಸಾದ್ ಕಾಯರಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಜಯಸೂರ್ಯ ಸ್ವಾಗತಿಸಿ,  ಯಜ್ಞೇಶ್ ವಂದಿಸಿದರು, ವಿದ್ಯಾರ್ಥಿನಿ ಕು. ಶುಭಾ ಕಾರ್ಯಕ್ರಮ ನಿರೂಪಿಸಿದರು

By suddi9

Leave a Reply

Your email address will not be published. Required fields are marked *