ಬಂಟ್ವಾಳ:  ತಾಲೂಕಿನ ಪಿಲಾತಬೆಟ್ಟು ಗ್ರಾಮ ಪಂಚಾಯಿತಿಗೆ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ ಅವರು ಬುಧವಾರ ಭೇಟಿ ನೀಡಿದರು.ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾರದಾ ನೇತೃತ್ವದಲ್ಲಿ ಸದಸ್ಯರು, ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಮುನಪ್ಪ ಕೊರವರ್‌ ಅವರು ವಿ.ಪ.ಸದಸ್ಯ ಕಿಶೋರ್ ಕುಮಾರ್ ಅವರನ್ನು ಸ್ವಾಗತಿಸಿದರು.


ಕೇಂದ್ರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, 15 ನೇ ಹಣಕಾಸು ಅನುದಾನ, ಸ್ವಚ್ಛ ಭಾರತ ಮಿಷನ್ , ಜಲಜೀವನ್ ಮಿಷನ್  ಮತ್ತು ರಾಜ್ಯ ಸರಕಾರದ ಬಸವ ವಸತಿ, ಡಾ. ಬಿ ಆರ್ ಅಂಬೇಡ್ಕರ್ ನಿವಾಸ್ ಯೋಜನೆಯ ಪ್ರಗತಿಯ ಬಗ್ಗೆ ಅವರು ಅಧ್ಯಕ್ಷರು,ಪಿಡಿಒ ಅವರೊಂದಿಗೆ ಚರ್ಚಿಸಿ ಪರಿಶೀಲಿಸಿದರು.

ನಮೂನೆ 9 – 11 , ಕಟ್ಟಡ ನಕ್ಷೆ ಅನುಮೋದನೆ,ಸ್ವಾಧೀನ ಪ್ರಮಾಣ ಪತ್ರ,ಕಟ್ಟಡ ತೆರಿಗೆ ಸಂಗ್ರಹಣೆ,ವಾರ್ಡ್ ಮತ್ತು ಗ್ರಾಮ ಸಭೆ, ಗ್ರಾಮ ಪಂಚಾಯತ್ ಅಭಿವೃದ್ಧಿಯಲ್ಲಿರುವ ಅಡಚಣೆ ಮತ್ತು  ಗ್ರಾಮ ಪಂಚಾಯತ್ ಕೈಗೊಂಡಿರುವ ಉತ್ತಮ ಆಡಳಿತದ ಬಗ್ಗೆಯು ವಿ.ಪ.ಸದಸ್ಯ ಕಿಶೋರ್ ಕುಮಾರ್ ಅಧ್ಯಕ್ಷರು, ಸದಸ್ಯರು ಹಾಗೂ ಪಿಡಿಒ ಅವರಿಂದ ಮಾಹಿತಿ ಪಡೆದರು.


ಪಿಲಾತಬೆಟ್ಟು  ಗ್ರಾಮ ಪಂಚಾಯತಿಯು ಸರ್ಕಾರದ 15ನೇ ಹಣಕಾಸು ಅನುದಾನ,ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನದಲ್ಲಿ ಸಾಧಿಸಿರುವ ಉತ್ತಮ ಪ್ರಗತಿಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯರಾದ  ತುಂಗಪ್ಪ ಬಂಗೇರ, ಮತ್ತು ಗ್ರಾಮಸ್ಥರಾದ  ಪುಷ್ಪಾನಂದ, ಹರೀಶ್ ಶೆಟ್ಟಿ, ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಎಂಬಿಕೆ ಯವರು, ಕೃಷಿ ಸಖಿ, ಪಶು ಸಖಿಯರು ಉಪಸ್ಥಿತರಿದ್ದರು. ಇತ್ತೀಚೆಗೆ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಗೊಂಡಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೂ ಅವರು ಶುಭ ಹಾರೈಸಿದರು. ಈ ಸಂದರ್ಭ ವಿ‌.ಪ.ಸದಸ್ಯ ಕಿಶೋರ್ ಕುಮಾರ್ ಗ್ರಾ.ಪಂ.ನ ಗ್ರಂಥಾಲಯ ಸಹಿತ ವಿವಿದೆಡೆಗೂ ಭೇಟಿಯಿತ್ತರು.ಸದ್ಯರಿಂದ ಅಹವಾಲನ್ಮು ಸ್ವೀಕರಿಸಿದರು

By suddi9

Leave a Reply

Your email address will not be published. Required fields are marked *