ಮಂಗಳೂರು: ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಮತ್ತು ಮುತ್ತೊಟ್ ಫೈನಾನ್ಸ್ ಲಿಮಿಟೆಡ್ ಇವರ ಜಂಟಿ ಆಶ್ರಯದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕೂಳೂರು ಮಂಗಳೂರು ಇಲ್ಲಿ ಮೂರನೇ ಸ್ಥನ್ಯಪಾನ ಕೊಠಡಿಯನ್ನು ಮು‌ತ್ತೊಟ್ ಫೈನಾನ್ಸಿನ ರೀಜನಲ್ ಮೆನೇಜರ್ ಪ್ರಶಾಂತ್ ನಾಯ್ಕ್ ಅವರು ಉದ್ಘಾಟಿಸಿ ಸ್ಥನ್ಯಪಾನ ಕೊಠಡಿಯನ್ನು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕೂಳೂರು ಇವರಿಗೆ ಹಸ್ತಾಂತರಿಸಲಾಯಿತು.

ಉದ್ಘಾಟಿಸಿ ಮಾತನಾಡಿದ ಪ್ರಶಾಂತ್ ನಾಯಕ್ ಸ್ಥನ್ಯಪಾನ ಕೊಠಡಿಯು ತಾಯಂದಿರಿಗೆ ಅತಿ ಮುಖ್ಯ ಎಂದು ವಿವರಿಸಿದರು. ಡಾ. ರಾಜೇಶ್ ಇವರು ಮೂಲತ್ವ ಫೌಂಡೇಶನ್ ಹಾಗೂ ಮುತ್ತೊಟ್ ಫೈನಾನ್ಸ್ ರವರ ಸಮಾಜಮುಖಿ ಕೆಲಸವನ್ನು ಶ್ಲಾಗಿಸಿದರು.

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕರಾದ ಪ್ರಕಾಶ್ ಕೋಟಿಯನ್ ಎಲ್ಲರನ್ನು ಸ್ವಾಗತಿಸಿದರು. ಮುತ್ತೊಟ್ ಫೈನಾನ್ಸ್ ಸಿ. ಎಸ್. ಆರ್ ಮ್ಯಾನೇಜರ್ ಪ್ರಸಾದ್ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮುತ್ತೊಟ್ ಫೈನಾನ್ಸ್ ಕ್ಲಸ್ಟರ್ ಮ್ಯಾನೇಜರ್ ಸಂದೇಶ್ ಶೇನೋಯ್, ಮುತ್ತೊಟ್‌ ಫೈನಾನ್ಸ್ ಕೊಟ್ಟಾರ ಬ್ರಾಂಚ್ ಮ್ಯಾನೇಜರ್ ಆಶಾಲತಾ ಅಂಚನ್, ಡಾ. ಚೈತ್ರಾ, ಗೌತಮ್, ಪ್ರವೀಣ್ ಫ್ರಾಂಕ್ ಮುತ್ತೊಟ್ ಫೈನಾನ್ಸ್, ಮೂಲತ್ವ ಫೌಂಡೇಶನ್ ನ ಟ್ರಸ್ಟಿ ಕಲ್ಪನಾ ಕೋಟ್ಯಾನ್, ಅಕ್ಷತಾ ಕದ್ರಿ ಉಪಸ್ಥಿತರಿದ್ದರು. ಮೂಲತ್ವ ಫೌಂಡೇಶನ್ ನ ಟ್ರಸ್ಟಿ ಶೈನೀ ಮೂಲತ್ವ ಧನ್ಯವಾದ ನೀಡಿದರು.

By suddi9

Leave a Reply

Your email address will not be published. Required fields are marked *