ಬಂಟ್ವಾಳ:  ತಾಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಸೇವಾ ಚಾರಿಟೇಬಲ್ ಟ್ರಸ್ಟ್  ಕರೆಂಕಿ ಇದರ ವತಿಯಿಂದ ಗಣೇಶ್ ಚತುರ್ಥಿ ಪ್ರಯುಕ್ತ 18 ನೇ ವರ್ಷದ ಆಟೋಟ ಸ್ಪರ್ಧೆಗಳು ಹಾಗು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕರೆಂಕಿ ವತಿಯಿಂದ ನೂತನ ಸ್ವಾಗತ ಗೋಪುರದ ಶೀಲಾನ್ಯಾಸ ಸಮಾರಂಭ  ದೇವಸ್ಥಾನದ ವಠಾರದಲ್ಲಿ ನಡೆಯಿತು.

ಶ್ರೀ ಕ್ಷೇತ್ರದ ಅರ್ಚಕರಾದ ಶ್ರೀ ಗುರುರಾಜ್ ಭಟ್ ಅವರು ಸ್ವಾಗತ ಗೋಪುರದ ಶೀಲಾನ್ಯಾಸ ವನ್ನು ನೆರವೇರಿಸಿದರು.
ಮಾಜಿ ತಾ.ಪಂ.ಅಧ್ಯಕ್ಷ  ಸುದರ್ಶನ್ ಜೈನ್ ಪಂಜಿಕಲ್ಲು, ಸ್ಥಳೀಯ ಪ್ರಮುಖರಾದ ನಾಗೇಶ್ ಸಾಲ್ಯಾನ್ ಕಡಂಬಳಿಕೆ,  ಹರೀಶ್ ಕೋಟ್ಯಾನ್ ಕುದನೆ,  ಧರ್ನಪ್ಪ ಪೂಜಾರಿ ರಾಮನಗರ,  ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ,  ರಾಮಚಂದ್ರ ಶೆಟ್ಟಿ ದಂಡೆ ಮೊದಲಾದವರಿದ್ದರು‌.

ಗಣೇಶೋತ್ಸವದ ಪ್ರಯುಕ್ತ ಶ್ರೀ  ಕ್ಷೇತ್ರದಲ್ಲಿ ಗಣಹೋಮ, ಅಪ್ಪದ ಪೂಜೆ, ಜರಗಿತು. ನಂತರ ಆಟೋಟ ಸ್ಪರ್ಧೆಗಳನ್ನು   ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಸ್ವಾಗತ ಗೋಪುರದ ಕೆಲಸಕ್ಕೆ ಶ್ರೀ ದುರ್ಗಾ ಮಹಿಳಾ ಸಮಿತಿ ಕರೆಂಕಿ ಇದರ ಪದಾಧಿಕಾರಿಗಳು ದೇಣಿಗೆಯನ್ನು ಹಸ್ತಾಂತರಿಸಿದರು.

ನಾರಾಯಣ ಗೌಡ ಕರೆಂಕಿ, ಪಂಚಾಯತ್ ಸದಸ್ಯ ಪೂವಪ್ಪ ಮೆಂಡನ್,  ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ವಿಠ್ಠಲ ಡಿ ದೇವಿ ನಗರ ಮತ್ತಿತರರು ಉಪಸ್ಥಿತರಿದ್ದರು. 

By suddi9

Leave a Reply

Your email address will not be published. Required fields are marked *