ಬಂಟ್ವಾಳ: ಸಾರ್ವಜನಿಕ ಶ್ರೀ  ಗಣೇಶೋತ್ಸವ ಸಮಿತಿ ಇರ್ವತ್ತೂರು ಇದರ ಆಶ್ರಯದಲ್ಲಿ ನಡೆದ 19ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಸ್ಥಳೀಯ ವೈದ್ಯರಾದ ಡಾ. ರಾಮಕೃಷ್ಣ ಎಸ್. ಅವರು ಉದ್ಘಾಟಿಸಿ ಚಾಲನೆ ನೀಡಿದರು.


ಈ ಸಂದರ್ಭ ಇರ್ವತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಕೊರಗ ಶೆಟ್ಟಿ, ಪ್ರಶಾಂತ್ ಕೋಟ್ಯಾನ್ ,ಶಾಲಿನಿ, ಯತೀಶ್ ಪೂಜಾರಿ, ಸಮಿತಿಯ  ಅಧ್ಯಕ್ಷರಾದ ಗುರು ಪ್ರಸಾದ್ ಶೆಟ್ಟಿ, ಗೌರವಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭ ದಲ್ಲಿ ಶ್ರೀಕ್ಷೇತ್ರ ಕುದ್ರೋಳಿಯ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು.ಬೂಡಾ ಅಧ್ಯಕ್ಷ ಬೇಬಿ ಕುಂದರ್ ಧಾರ್ಮಿಕ ಉಪನ್ಯಾಸ ನೀಡಿದರು.  ಬಂಟ್ಚಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು,  ಮಾಜಿ ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಶ ತುಂಗಪ್ಪ ಬಂಗೇರ,ಪಂಚ ಗ್ಯಾರಂಟಿ ಅನುಷ್ಠಾನ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷೆ  ಗ್ಯಾರೆಂಟಿ ಅಧ್ಯಕ್ಷೆ  ಜಯಂತಿ ವಿ. ಪೂಜಾರಿ,ಪ್ರಮುಖರಾದ ಆನಂದ್ ಆಚಾರ್ಯ ಆರ್ಕಾಡಿ, ಜಗದೀಶ್ ಕೊಯಿಲ
ಯೋಗೀಶ್ ಪೂಜಾರಿ, ಶೇಖರ್ ಪೂಜಾರಿ,
ನಜೀರ್ ಸಾಹೇಬ್ ,ಗ್ರಾಮ ಪಂಚಾಯತ್ ಸದಸ್ಯರಾದ ಪ್ರಶಾಂತ್ ಜೈನ್, ದಯಾನಂದ ನಾಯ್ಕ್, ಸುಧೀಂದ್ರ ಶೆಟ್ಟಿ, ಎಂ.ಪಿ ಶೇಖರ್ , ವಿಜಯ್ಉಪಸ್ಥಿತರಿದ್ದರು.
ಇದೇ ವೇಳೆ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ಕು. ಲತಾ ಶ್ರೀ ಕುಲಾಲ್, ಮಹಮದ್ ಫಝಲ್, ಮೋಕ್ಷಿತ್ ಪೂಜಾರಿ ಅಕ್ಷಿತಾ ಮಠ ,ಯಶ್ವಿತಾ ಪೂಜಾರಿ ಅವರಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು.
ಕು. ದಿಯಾ ಯಸ್ ಶೆಟ್ಟಿ, ಆರೋಗ್ಯ ಸುರಕ್ಷಾಧಿಕಾರಿ ಸಂಧ್ಯಾ ಇವರನ್ನು ಸನ್ಮಾನಿಸಲಾಯಿತು.ಗಣೇಶೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಮಿತಿಯ ಸದಸ್ಯರಾದ  ನಿಶ್ಚಿತ್ ಶೆಟ್ಟಿ, ದೇವಪ್ಪ ಶೆಟ್ಟಿ ಕುಂಟಜಾಲು,ಸತೀಶ್ ಕರ್ಕೆರ ಡಿ.ಎನ್,ಸಂಜೀವ ಡಿ.ಎನ್,ಆನಂದ ದೊಡ್ಡಕೆರೆ,ಸುಧಾಕರ,ಶ್ರೀಧರ, ಯತೀಶ್  ಉಪಸ್ಥಿತರಿದ್ದರು. 

By suddi9

Leave a Reply

Your email address will not be published. Required fields are marked *