ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಸಾಂಸ್ಕೃತಿಕ ಸಂಘ ಮತ್ತು ಸಂಸ್ಕೃತ ವಿಭಾಗದಿಂದ  ರಕ್ಷಾಬಂಧನ ಹಾಗೂ ಸಂಸ್ಕೃತ ದಿನ ಕಾರ್ಯಕ್ರಮವು ಶನಿವಾರ  ಆಜಾದ್ ಭವನದಲ್ಲಿ ನಡೆಯಿತು.

 ಬಾಳ್ತಿಲ  ಗ್ರಾಮ ಪಂಚಾಯಿತಿಯ  ಸಿಬ್ಬಂದಿಯವರೊಂದಿಗೆ ಈ ಬಾರಿಯ ರಕ್ಷಾಬಂಧನವನ್ನು ಆಚರಿಸಲಾಯಿತು.ಸ್ಥಳೀಯ ಬಾಳ್ತಿಲ ಗ್ರಾಮ ಪಂಚಾಯಿತಿಯ ಸುಂದರ ನಾಯ್ಕ, ಸಂಧ್ಯಾ, ಸುರೇಖಾ, ನಾಗೇಶ್, ಜ್ಯೋತಿ. ಬಿ, ಮಮತಾ ಅದೇರೀತಿ ಗೋಳ್ತಮಜಲು ಗ್ರಾಮ ಪಂಚಾಯಿತಿಯ ವಿಜಯ ಶಂಕರ ಆಳ್ವ , ಸುರೇಶ್, ಎಂ, ರೇವತಿ, ಗೀತಾಂಜಲಿ, ವನಿತಾ, ಚೈತ್ರ, ನಿಶ್ಮಿತಾ, ಜಯ ಕೆ, ಹರೀಶ್ ಎನ್ ಅವರು ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿದ್ದರು. 

ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ  ವಸಂತಮಾಧವ ಶ್ರೀಮಾನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯ  ಸುಜಿತ್ ಕೊಟ್ಟಾರಿ ಅವರು ರಕ್ಷಾಬಂಧನ ಹಾಗೂ ಸಂಸ್ಕೃತದ ಮಹತ್ವವನ್ನು ತಿಳಿಸಿದರು. 

 ಗೋಳ್ತಮಜಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ  ವಿಜಯಶಂಕರ ಆಳ್ವ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಭ್ಯಾಗತರಾಗಿದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ರಕ್ಷೆಯನ್ನು ಕಟ್ಟಿ ಭ್ರಾತೃತ್ವವನ್ನು ಸಾರಿದರು.

ಹಾಗೆಯೇ ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟಿ ಸಿಹಿಯನ್ನು ಸವಿದರು. ಉಪ ಪ್ರಾಂಶುಪಾಲರಾದ  ಯತಿರಾಜ್ ಶ ಸ್ವಾಗತಿಸಿ,ವಿದ್ಯಾರ್ಥಿನಿಯರಾದ ಕು. ದಿವ್ಯಲಕ್ಷ್ಮೀ ವಂದಿಸಿದರು, ಕು. ಧನು ಶ್ರೀ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ಕು. ಶರಣ್ಯಶ್ರೀ ರಕ್ಷಾಬಂಧನ ಗೀತೆಯನ್ನು ಹಾಡಿದರು.

By suddi9

Leave a Reply

Your email address will not be published. Required fields are marked *