ಬಂಟ್ವಾಳ : ಜಮೀಯ್ಯತಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ 2025-27 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಬಿ.ಎಂ. ಅಬ್ಬಾಸ್ ಅಲಿ ಬೋಳಂತೂರು ಅವರು ಆಯ್ಕೆಯಾಗಿದ್ದಾರೆ.ಬಿ.ಸಿ.ರೋಡಿನ ಲಯನ್ಸ್ ಭವನದಲ್ಲಿ ಘಟಕದ ಅಧ್ಯಕ್ಷ ರಶೀದ್ ವಿಟ್ಲಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು.

ಕಾರ್ಯದರ್ಶಿಯಾಗಿ ಹಕೀಮ್ ಕಲಾಯಿ, ಕೋಶಾಧಿಕಾರಿಯಾಗಿ ರಶೀದ್ ವಿಟ್ಲ, ಉಪಾಧ್ಯಕ್ಷರಾಗಿ ಆಸಿಫ್ ಇಕ್ಬಾಲ್ ಕುಂಪನಮಜಲು, ಬಿ.ಎಂ.ತುಂಬೆ, ಜೊತೆ ಕಾರ್ಯದರ್ಶಿಯಾಗಿ ಕೆ.ಎಸ್. ಮಹಮ್ಮದ್ ಗಡಿಯಾರ, ಸಂಘಟನಾ ಕಾರ್ಯದರ್ಶಿ ಶೇಖ್ ರಹ್ಮತುಲ್ಲಾ ಕಾವಳಕಟ್ಟೆ, ಪತ್ರಿಕಾ ಕಾರ್ಯದರ್ಶಿಯಾಗಿ ಆಶಿಕ್ ಕುಕ್ಕಾಜೆ ಆಯ್ಕೆಯಾದರು.
ಕಾರ್ಯಕಾರೀ ಸಮಿತಿ ಸದಸ್ಯರಾಗಿ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಎಂ.ಎಚ್. ಇಕ್ಬಾಲ್ ಮೆಲ್ಕಾರ್, ಎಫ್.ಎಂ. ಬಶೀರ್ ಫರಂಗಿಪೇಟೆ, ಕೆ.ಕೆ.ಶಾಹುಲ್ ಹಮೀದ್, ರಫೀಕ್ ಹಾಜಿ ಆಲಡ್ಕ , ಲತೀಫ್ ನೇರಳಕಟ್ಟೆ, , ನೋಟರಿ ಅಬೂಬಕರ್ ವಿಟ್ಲ, ಅಬ್ದುಲ್ ರಝಾಕ್ ಅನಂತಾಡಿ, ಮಹಮ್ಮದ್ ನಾರಂಕೋಡಿ,
ಪಿ.ಮಹಮ್ಮದ್ ಪಾಣೆಮಂಗಳೂರು, ಹಂಝ ಬಸ್ತಿಕೋಡಿ, ವಿ.ಎಚ್.ಅಶ್ರಫ್ ವಿಟ್ಲ, ಸಾಗರ್ ಮಹಮ್ಮದ್ ಪರ್ಲಿಯ ಆಯ್ಕೆಗೊಂಡರು.
ಜಮೀಯ್ಯತುಲ್ ಫಲಾಹ್ ಕೇಂದ್ರೀಯ ಘಟಕದ ಕೋಶಾಧಿಕಾರಿ ನ್ಯಾಯವಾದಿ ಕೆ.ಎಂ. ಸಿದ್ದೀಕ್ ಪುತ್ತೂರು ಅವರು ಮಹಾಸಭೆಯ ವೀಕ್ಷಕರಾಗಿ ಭಾಗವಹಿಸಿ ಸಂಸ್ಥೆಯ 37 ವರ್ಷದ ಇತಿಹಾಸವನ್ನೊಳಗೊಂಡ ಚೈತನ್ಯ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಮಹಮ್ಮದ್ ಬಪ್ಪಳಿಗೆ, ಜಿಲ್ಲಾ ಕಾರ್ಯದರ್ಶಿ ಶೇಖ್ ಅಬ್ದುಲ್ ಗಫೂರ್ ವೇದಿಕೆಯಲ್ಲಿದ್ದರು.
ನಿರ್ಗಮನ ಅಧ್ಯಕ್ಷ ರಶೀದ್ ವಿಟ್ಲ ಸಹಕರಿಸಿದ ಸದಸ್ಯರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಸಂಸ್ಥೆಯ ಕಾರ್ಯದರ್ಶಿ ಕೆ.ಕೆ. ಶಾಹುಲ್ ಹಮೀದ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್ ಲೆಕ್ಕಪತ್ರ ಮಂಡಿಸಿದರು.
ಉಪಾಧ್ಯಕ್ಷ ಲತೀಫ್ ನೇರಳಕಟ್ಟೆ ಸ್ವಾಗತಿಸಿ,ಅಬೂಬಕರ್ ನೋಟರಿ ಕಿರಾಅತ್ ಪಠಿಸಿದರು. ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.
