ಬಂಟ್ವಾಳ : ದೀನ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ದ. ಕ ಜಿ. ಪಂ. ತಾಲೂಕು ಪಂಚಾಯತ್ ಬಂಟ್ವಾಳ, ಕೃಷಿ ಇಲಾಖೆ ಬಂಟ್ವಾಳ, ಗ್ರಾಮ ಪಂಚಾಯತ್ ಗೋಳ್ತಮಜಲು ಹಾಗೂ ಸಂಜೀವಿನಿ ಒಕ್ಕೂಟ ಗೋಳ್ತಮಜಲು ಇದರ ಸಹಯೋಗದಲ್ಲಿ ಹಡಿಲು ಬಿದ್ದ ಗದ್ದೆಯ ನೇಜಿ ನಾಟಿ ಕಾರ್ಯಕ್ರಮ ಗೋಳ್ತಮಜಲು ಗ್ರಾಮದ ಬಲ್ಕಟ್ಟ ಕೊಗ್ಗು ಪೂಜಾರಿಯವರ ಮನೆಯಲ್ಲಿ ನಡೆಯಿತು.

ಬಂಟ್ವಾಳ ತಾ. ಪಂ. ಕಾರ್ಯನಿರ್ವಾಹಣಾ ಧಿಕಾರಿ ಸಚಿನ್ ಕುಮಾರ್ ಹಾಗೂ ಜಿಲ್ಲಾ ಕೃಷಿ ಸಹಾಯಕ ನಿರ್ದೇಶಕರಾದ ಕುಮುದ ತೆಂಗಿನ ಹೂ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ತಾಪಂ.ಇ.ಒ.ಸಚಿನ್ ಕುಮಾರ್ ಮಾತನಾಡಿ, ತಾಂತ್ರಿಕತೆಯ ಜೀವನದ ಮಧ್ಯೆ ಕೃಷಿ ಚಟುವಟುಕೆಗಳು ಮಾಯವಾಗಿದೆ. ಜಿಲ್ಲೆಯಲ್ಲಿ ಸಣ್ಣ,ಸಣ್ಣ ಹಿಡುವಳಿದಾರರಿರುವುದರಿಂದ ಯಾಂತ್ರೀಕೃತ ಕೃಷಿ ಕೂಡ ಕಷ್ಟ ಸಾಧ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಜನತೆ ಭತ್ತದ ಕೃಷಿಯಲ್ಲಿ ಹೆಚ್ಚಿನ ಉತ್ಸುಕರಾಗಿದ್ದು, ಹಡಿಲು ಗದ್ದೆಯಲ್ಲಿ ಭತ್ತದ ನಾಟಿ ಕಾರ್ಯಗಳು ನಡೆಯುತ್ತಿವೆ. ಇದರಿಂದ ಭೂಮಿಯಲ್ಲಿ ಅಂತರ್ಜಲ ಮಟ್ಟವನ್ನು ಸುಧಾರಿಸಲು ಸಾಧ್ಯವಿದೆ ಎಂದು ಹೇಳಿದರು.

ಗ್ರಾ.ಪಂ.ಅಧ್ಯಕ್ಷೆ ಪ್ರೇಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ತಾಲೂಕು ಕೃಷಿ ಅಧಿಕಾರಿ ನಂದನ್ ಶೆಣೈ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಜಯಶಂಕರ್ ಆಳ್ವ, ಎನ್ ಆರ್ ಎಲ್ ಎಂ ಅಭಿಯಾನದ ತಾಲೂಕು ವ್ಯವಸ್ಥಾಪಕರಾದ ಸುಧಾ,ಗದ್ದೆಯ ಮಾಲಕ ಕೊಗ್ಗು ಪೂಜಾರಿ ಕರುಣಾಕರ ಬಲ್ಕಟ್ಟ ಉಪಸ್ಥಿತರಿದ್ದರು.
ಗಾಯತ್ರಿ ಅಳಿಕೆ ಪ್ರಾರ್ಥಿಸಿದರು. ತಾಲೂಕು ಮೇಲ್ವಿಚಾರಕಿ ಕುಸುಮ ಸ್ವಾಗತಿಸಿದರು. ಭವಾನಿ ವಂದಿಸಿದರು. ಕೃಷಿ ಸಖಿ ಪುಷ್ಪವತಿ. ಪಿ ಕಾರ್ಯಕ್ರಮ ನಿರೂಪಿಸಿದರು.
