ಬಂಟ್ವಾಳ: ಇಲ್ಲಿನ ವಿದ್ಯಾಗಿರಿ ಶ್ರೀ ವೆಂಕಟರಮಣ ಸ್ವಾಮಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಸ್ಕೌಟ್, ಗೈಡ್ಸ್, ಎನ್.ಸಿ.ಸಿ ಘಟಕದ ವತಿಯಿಂದ ‘ಬರವುದ ಬಿತ್ತಿಲ್ಡ್ ಆಟಿದ ಲೇಸ್’ ಕಾರ್ಯಕ್ರಮವು  ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ  ತುಳು ನಿರೂಪಕರಾದ ದಿನೇಶ್ ಸುವರ್ಣ ರಾಯಿ ದೀಪ ಬೆಳಗಿಸಿ, ತೆಂಗಿನ ಹೂ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಟಿ ತಿಂಗಳಿನ ಮಹತ್ವವನ್ನು ವಿವರಿಸಿದರು.

 ಯಸ್ಮಿತಾ ವೈ ಮತ್ತವರ ತಂಡದಿಂದ ತುಳು ಪಾಡ್ದನ ಹಾಡಿ ಗಮನಸೆಳೆದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ  ಹರಿಪ್ರಸಾದ್ ವಹಿಸಿದ್ದರು. ಪ್ರಾಥಮಿಕಶಾಲಾಮುಖ್ಯೋಪಾಧ್ಯಾಯರಾದ  ಚೈತ್ರ ಶೆಟ್ಟಿ ಮತ್ತು ಪೂರ್ವಪ್ರಾಥಮಿಕ ವಿಭಾಗದ ಸಂಯೋಜಕಿ ವೀಣಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ ವಿವಿಧ ತುಳು ನೃತ್ಯ , ಹಾಡು, ಪ್ರಹಸನ  ಹಾಗೂ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಕ್ರೀಡಾಕೂಟಗಳು ನಡೆಯಿತು. 

ಆಟಿ ತಿಂಗಳ ವಿಶಿಷ್ಟ ಖಾದ್ಯಗಳನ್ನು ಪೋಷಕರ ಸಹಯೋಗದಿಂದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ವಿದ್ಯಾರ್ಥಿಗಳಾದ ಕು. ನಿತೀಕ್ಷಾ ಸ್ವಾಗತಿಸಿದರು,  ಆಕಾಶ್ ವಂದಿಸಿದರು ,  ಕು.ಯಸ್ಮಿತಾ ವೈ, ಪ್ರಣವಿ ಆರ್ ಸುವರ್ಣ, ತನುಷ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

By suddi9

Leave a Reply

Your email address will not be published. Required fields are marked *