ಮಂಗಳೂರು: ಜಿಲ್ಲಾ ನ್ಯಾಯಾಲಯದ ಖ್ಯಾತ ವಕೀಲರಾಗಿದ್ದನೋಟರಿ ರಾಮಕೃಷ್ಣ ರೈ (ಅಂಡಾಲಬೀಡು)( 63 )
ದಿ| ಕೊಲ್ಲಬೆಟ್ಟು ಶ್ರೀ ಸಂಜೀವ ರೈ ಮತ್ತು ದಿ| ಅಂಡಾಲಬೀಡು ಶೀಮತಿ ವಾರಿಜಾ ರೈ ಇವರ ಪುತ್ರಇವರು 29 ಜುಲೈ 2025 ರಂದು ಹೃದಯಾಘಾತದಿಂದ ನಿಧನ ಹೊಂದಿದರು.

ಅವರು ಮಿಲಾಗ್ರಿಸ್ ಸೆಂಟರ್, ಮಂಗಳೂರುನಲ್ಲಿ ತಮ್ಮ ಸ್ವಂತ ಕಚೇರಿಯಲ್ಲಿ 35 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸರ್ಕಾರದಿಂದ ಮಂಗಳೂರು ಪ್ರಧಾನ ವಕೀಲರಾಗಿ ಹಾಗೂ ಕೇಂದ್ರ ಸರ್ಕಾರದ ಸ್ಟ್ಯಾಂಡಿಂಗ್ ಕೌನ್ಸೆಲ್ ಆಗಿ ಒಂದು ವರ್ಷದ ಅವಧಿಗೆ ನೇಮಕಗೊಂಡು ಅವರು ಸೇವೆ ಸಲ್ಲಿಸಿದ್ದಾರೆ.
ಅವರು ನಿಷ್ಠೆ, ಪ್ರಾಮಾಣಿಕತೆ, ನ್ಯಾಯಮೂಲ್ಯಗಳ ಮೇಲೆ ನಂಬಿಕೆ ಮತ್ತು ಪರೋಪಕಾರಿ ದೃಷ್ಟಿಕೋನದಿಂದ ವಕೀಲ ವೃತ್ತಿಗೆ ಸಮರ್ಪಿತರಾಗಿದ್ದರು.
ಅವರ ಅಗಲಿಕೆಯಿಂದ ಬಂಧು ಮಿತ್ರರು ಹಾಗೂ ಕುಟುಂಬಸ್ಥರಿಗೆ ಅತೀವ ದುಃಖವಾಗಿದೆ.
