ಬಂಟ್ವಾಳ : ಓಂ ಫ್ರೆಂಡ್ಸ್ ಕ್ಲಬ್ (ರಿ) ಕಳ್ಳಿಗೆ ಪಚ್ಚಿನಡ್ಕ ಆಶ್ರಯದಲ್ಲಿ ಭಾನುವಾರ ನಡೆದ ಆಟಿದ ಕೂಟ ಕಾರ್ಯಕ್ರಮವನ್ನು ಪತ್ರಕರ್ತ ರಾಜಾ ಬಂಟ್ವಾಳ್ ದೀಪ ಬೆಳಗಿಸಿ, ಆಟಿ ಕಳೆಂಜನಿಗೆ ಮಡಿಲು ತುಂಬಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಪ್ರಸ್ತಾವನೆ ನೀಡಿ ಕಳೆದ 26 ವರ್ಷಗಳಿಂದ ಸಂಘವು ನಡೆದು ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರು.ಉಪಾಧ್ಯಕ್ಷ ಸದಾಶಿವ ಆಚಾರ್ಯ, ರಜತ ಸಂಭ್ರಮ ಅಧ್ಯಕ್ಷ ಹರೀಶ್ ಶೆಟ್ಟಿ ಪಡು, ಗಣ್ಯರಾದ ಚಂದ್ರಾವತಿ ಸೇಸಪ್ಪ ಕೋಟ್ಯಾನ್, ಬಾಲಗೋಕುಲ ಅಧ್ಯಕ್ಕೆ ಮಾಲ ಗಣೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಟಿಕಳೆಂಜ, ಕಂಬುಳ, ಅಗೋಳಿ ಮಂಜಣ್ಣ, ಪರಶುರಾಮ, ಸುಗ್ಗಿ ಕುಣಿತ, ಕೋಳಿ ಅಂಕ, ಕಡಲ ಪರ್ಬ ಮೊದಲಾದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.ಪ್ರಧಾನ ಕಾರ್ಯದರ್ಶಿಚರಣ್ ಆಚಾರ್ಯ, ಕವಿತಾ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
