ಬಂಟ್ವಾಳ: ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ,ಧರ್ಮದರ್ಶಿ ಹರಿಕೃಷ್ಣ ಪುನರೂರು,ಮಾಜಿ ಸಚಿವ ರಮಾನಾಥ ರೈ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭವನ್ನು ನ.16 ರಂದು ಬಿ.ಸಿ.ರೋಡಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು,ಈ ನಿಟ್ಟಿನಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಅಭಿನಂದನಾ ಸಮಿತಿ ಸಂಚಾಲಕಜಗನ್ನಾಥ ಚೌಟ ಬದಿಗುಡ್ಡೆ ಹಾಗೂ ಅಧ್ಯಕ್ಷಕೈಯೂರು ನಾರಾಯಣ ಭಟ್ ,ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ,ಯೋಗೀಶ್ ಕುಮಾರ್ ಬೆಳ್ತಂಗಡಿ ಅವರು ಮಾತನಾಡಿದರು.
ಶಿವಪ್ರಸಾದ್ ಆಲಂಗಾಡಿ,ಸುಂದರ ಪೂಜಾರಿ, ಶುಭಾಶ್ ಅಳದಂಗಡಿ,ಬಾಲಕೃಷ್ಣ ಶೆಟ್ಟಿ,ರಾಜು ಸಾಲ್ಯಾನ್,ರಾಮ್ ಗಣೇಶ್,ಪ್ರಭಾಕರ ಶೆಟ್ಟಿ,ರಾಜಮಣಿ ರಾಮಕುಂಜ, ಮೋಹನದಾಸ ಕೊಟ್ಟಾರಿ,ಸುಭಾಶ್ ರೈ ಮೊದಲಾದವರು ಉಪಸ್ಥಿತರಿದ್ದರು.
ಸಮಾಜದ ಸ್ಪಂದನೆಯೊಂದಿಗೆ ಕಾರ್ಯಕ್ರಮ ಆಯೋಜಿಸುವುದು ,ಸಮಾರಂಭದ ಯಶಸ್ವಿಗೆ ಜಿಲ್ಲೆ ಹಾಗೂ ತಾಲೂಕುಸಮಿತಿ ರಚಿಸಲು ತೀರ್ಮಾನಿದಲಾಯಿತಲ್ಲದೆ ರಮಾನಾಥರೈ ಮತ್ತು ಹರಿಕೃಷ್ಣ ಪುನರೂರು ಅವರ ಅಭಿಮಾನಿಗಳು ಹಾಗೆಯೇ ಸಹಕಾರ ಪಡೆದ ಫಲಾನುಭವಿಗಳ ಸಂಪೂರ್ಣ ಸಹಕಾರ ಯಾಚಿಸಲು ನಿರ್ಧರಿಸಲಾಯಿತು.
ಈ ಸಂದರ್ಭಧಾರ್ಮಿಕ ಕಾರ್ಯಕ್ರಮ,ಉಪಹಾರ,ಸಭಾಕಾರ್ಯಕ್ರಮ,ಮಧ್ಯಾಹ್ನ ಸಹಭೋಜನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು..ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ನಿರ್ವಹಿಸಿದರು.
