ಬಂಟ್ವಾಳ: ತುಂಬೆ ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ , ಸೇವಾ ಭಾರತಿ ಬಂಟ್ವಾಳ ತಾಲೂಕು ಮತ್ತು ಸೇವಾ ಜಾಗರಣ ತುಂಬೆ ವತಿಯಿಂದ ಕೆ.ಎಂ.ಸಿ ಆಸ್ಪತ್ರೆ ಮತ್ತು ವೆನ್ಲಾಕ್ ಸರಕಾರಿ ಆಸ್ಪತ್ರೆ ಮಂಗಳೂರು ಇವುಗಳ ಸಹಯೋಗದಲ್ಲಿ ತುಂಬೆಯ ಶ್ರೀ ಶಾರದಾ ಸಭಾ ಭವನದಲ್ಲಿ 40ನೇ ರಕ್ತದಾನ ಶಿಬಿರ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ,ಸೇವಾ ಭಾರತಿ, ಸೇವಾ ಜಾಗರಣ ಹಾಗೂ ಶಾರದಾ ಪ್ರತಿಷ್ಠಾನದ ಸಮಾಜ ಮುಖಿ ಕಾರ್ಯಗಳನ್ನು ಶ್ಲಾಘಿಸಿ, ಶಾರದಾಭವನದ ವಿಸ್ತೃತ ಕಟ್ಟಡಕ್ಕೆ ಅನುದಾನ ನೀಡುವ ಭರವಸೆಯಿತ್ತರು.
ಶ್ರೀ ಗೋಕರ್ಣನಾಥ ಕೋ. ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷಜಯರಾಮ ಪೂಜಾರಿ ಇರಾ,ಹಿಂದೂ ಮುಖಂಡ ರವಿರಾಜ್ ಬಿ.ಸಿ ರೋಡ್,ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಗಣೇಶ್ ಸುವರ್ಣ ತುಂಬೆ, ಉಪಾಧ್ಯಕ್ಷೆ ಶೋಭಾ ಗೋಪಾಲ್ ಮೈಂದನ್, ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾದ ರಾಘವ ಬಂಗೇರ ಪೆರ್ಲಬೈಲ್,ಪ್ರವೀಣ್ ಕುಮಾರ್ ಕಾಣೆಮಾರ್ ತುಂಬೆ, ರಾಘವೇಂದ್ರ ವೇದಿಕೆಯಲ್ಲಿದ್ದರು.
ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ಸಂಚಾಲಕರಾದ ತೇವು ತಾರಾನಾಥ ಕೊಟ್ಟಾರಿ ಸ್ವಾಗತಿಸಿ, ಪ್ರಸ್ತಾವನೆಗೈದರು.ಇದೇ ವೇಳೆ ಗುರು ಪೂರ್ಣಿಮೆ ಪ್ರಯುಕ್ತ ಸ್ಥಳೀಯ ಹಿರಿಯ ವೈದ್ಯರಾದ ಡಾ. ವಿಠಲ್ ದಾಸ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ರಕ್ತದಾನ ಶಿಬಿರದಲ್ಲಿ 60ಕ್ಕೂ ಅಧಿಕ ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಸುಶಾನ್ ಬೊಳ್ಳಾರಿ ಕಾರ್ಯಕ್ರಮ ನಿರೂಪಿಸಿದರು, ಯೋಗೀಶ್ ಕಜೆಕಂಡ ವಂದಿಸಿದರು.
