ಬಂಟ್ವಾಳ: ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಆರ್. ಎಸ್ ಎಸ್. ನಿಷೇಧಿಸುವ ತೀರ್ಮಾನ ಮಾಡುತ್ತೇವೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ನೀಡಿರುವ ದುರಾಹಂಕಾರ, ಬೇಜವಾಬ್ದಾರಿ ಹೇಳಿಕೆಯನ್ನು ಬಂಟ್ವಾಳ ಬಿಜೆಪಿ ಮುಖಂಡ ಪ್ರಭಾಕರ ಪ್ರಭು ಅವರು ತೀವ್ರವಾಗಿ ಖಂಡಿಸಿದ್ದಾರೆ.


ಸಚಿವ ಪ್ರಿಯಾಂಕಖರ್ಗೆಯವರು ಮೊದಲು ತನ್ನ ಖಾತೆಯ ಇಲಾಖೆಯಲ್ಲಿರುವ  ಲೋಪ ದೋಷಗಳನ್ನು ಸರಿಪಡಿಸುವಲ್ಲಿ ತೀರ್ಮಾನ ಮಾಡಲಿ ಹಾಗೂ ಗ್ರಾಮೀಣ ಭಾಗದ  ಗ್ರಾಮ ಪಂಚಾಯತ್ ಗಳಲ್ಲಿರುವ ನೂರಾರು ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಿ,ಅದು ಬಿಟ್ಟು ಕೈಯಲ್ಲಾಗದಿರುವುದನ್ನು ಆಲೋಚಿಸುವುದು ಬೇಡ ಎಂದು ಪ್ರಭು ಪತ್ರಿಕಾ ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.


ಸಚಿವರ ಈ ಹೇಳಿಕ ಅವರ ವ್ಯಕ್ತಿತ್ವಕ್ಕೆ ತಕ್ಕದಾದ ಅಲ್ಲ,ಆರ್. ಎಸ್. ಎಸ್. ಸ್ಥಾಪನೆ ಯಾದಗಿನಿಂದ ನಿಷೇಧದ ಬಗ್ಗೆ ಮಾತನಾಡಿರುವ ಅದೆಷ್ಟೋ ಮಂದಿ ಅತೀ ಬುದ್ದಿವಂತರು ಹೇಳದೇ ಕೇಳದೇ ದೇಶದಲ್ಲಿ ಕಣ್ಮರೆ ಯಾಗಿದ್ದಾರೆ. ಅದ್ರೆ ಆರ್. ಎಸ್. ಎಸ್. ಮಾತ್ರ ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ  ವಟವ್ರಕ್ಷವಾಗಿ ಈಗ ಶತಮಾನೋತ್ಸವದ ಹೊಸ್ತಿಲಲ್ಲಿ ಬಂದು ನಿಂತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಆರ್ ಎಸ್ ಎಸ್ ಜಗತ್ತಿನ ಅತೀ ದೊಡ್ಡ ಸಂಘಟನೆಯಾಗಿ ಹೊರಹೊಮ್ಮಿರುವುದು ತಮಗೆ ತಿಳಿದಿಲ್ಲವೇ?2002 ರ  ಜನವರಿಯಲ್ಲಿ ಬೆಂಗಳೂರಿನ ನಾಗವರದಲ್ಲಿ ನಡೆದ ರಾ. ಸ್ವ. ಸೇ. ಸಂಘದ “ಸಮರಸತಾ ಸಂಗಮ”ಕ್ಕೆ  ತಮ್ಮ ತಂದೆಯವರಾದ ಮಲ್ಲಿಕಾರ್ಜುನ ಖರ್ಗೆಯವರು ಭೇಟಿ ನೀಡಿಮೆಚ್ಚುಗೆ ವ್ಯಕ್ತಪಡಿಸಿದ್ದು ನೆನಪಿಲ್ಲವೇ ಎಂದೂ ಪ್ರಭು ಪ್ರಕಟಣೆಯ ಮೂಲಕ ಪ್ರಶ್ನಿಸಿದಾರೆ.ಇಂತಹ  ಸಂಘಟನೆ ಬಗ್ಗೆ ಮಾತನಾಡುವ ನೈತಿಕತೆಯೇ ಸಚಿವ ಪ್ರಿಯಾಂಕಖರ್ಗೆಯವರಿಗಿಲ್ಲ  ಎಂದು ಪ್ರಭುರವರು ತಿಳಿಸಿದ್ದಾರೆ. 

By suddi9

Leave a Reply

Your email address will not be published. Required fields are marked *