ಬಂಟ್ವಾಳ: ದ.ಕ ಜಿಲ್ಲಾ ಪಂಚಾಯತ್ , ಬಂಟ್ವಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ, ಬಂಟ್ವಾಳ ಇವರ ಜಂಟಿ ಆಶ್ರಯದಲ್ಲಿ  ಡೆಂಗ್ಯೂ ಹಾಗೂ ಕೀಟ ಜನ್ಯ ರೋಗಗಳ ಬಗ್ಗೆ ಜನ ಜಾಗೃತಿ ಅಭಿಯಾನ ನಡೆಯಿತು. 

ಬಂಟ್ವಾಳ ನಗರ ವೈದ್ಯಾಧಿಕಾರಿಗಳಾದ ಡಾ. ಅಶ್ವಿನಿ ಇವರು ಡೆಂಗ್ಯೂ ಹಾಗೂ ಕೀಟ ಜನ್ಯ ರೋಗಗಳ  ಹರಡುವಿಕೆ, ನಿಯಂತ್ರಣ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. ನಿರೀಕ್ಷಣಾಧಿಕಾರಿ ರಾಕೇಶ್ ಸುರಕ್ಷಣಾಧಿಕಾರಿ ಸಂಧಿಕಾ,ಆಶಾ ಕಾರ್ಯಕರ್ತೆಯರಾದ  ಮಂಜುಳಾ, ಆಶಾ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ  ಶ್ರೀದೇವಿ ಪಿ ಅಭಿಯಾನದಲ್ಲಿ ಭಾಗವಹಿಸಿದರು.ಶಾಲೆಯ ಮುಖ್ಯ ಶಿಕ್ಷಕರಾದ  ಹರಿಪ್ರಸಾದ್ ಸ್ವಾಗತಿಸಿದರು.

By suddi9

Leave a Reply

Your email address will not be published. Required fields are marked *