ಬಂಟ್ವಾಳ: ಬಂಟ್ವಾಳ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ನಡೆಯಿತು.ಈ ಸಂದರ್ಭ ಕೃಷಿ ಕ್ಷೇತ್ರದಲ್ಲಿ ತನ್ನ ವೈವಿಧ್ಯಮಯ ವಿಧಾನಗಳ ಮೂಲಕ ಸಾಧನೆ ಮಾಡಿದ ಹಿರಿಯರಾದ ನೀಲಪ್ಪ ಗೌಡ ಅವರನ್ನು ಸನ್ಮಾನಿಸಲಾಯಿತು.


ಅತಿಥಿಯಾಗಿದ್ದ ಕೆಂಪೇಗೌಡರ ಕುರಿತು ಮಾತನಾಡಿದ ನಿವೃತ್ತ ಉಪನ್ಯಾಸಕ ಪದ್ಮಯ್ಯ ಗೌಡ ಪೈಸಾರಿ, ಕೆಂಪೇಗೌಡರು ಮಾದರಿಯಾದ ಸಾಮ್ರಾಜ್ಯವನ್ನು ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಿಸಿದ್ದನ್ನು ನೆನಪಿಸಿದರು. ಅವರು ನಿರ್ಮಿಸಿದ ಬೆಂಗಳೂರು ಈಗ ಜಗತ್ತನ್ನೇ ಸೆಳೆಯುತ್ತಿರುವುದನ್ನು ಗಮನಿಸಬೇಕು ಎಂದರು..
ಬಂಟ್ವಾಳ ತಹಸೀಲ್ದಾ‌ರ್ ಡಿ. ಅರ್ಚನಾ ಭಟ್ ,ಬುಡಾ ಅಧ್ಯಕ್ಷ ಬೇಬಿ ಕುಂದರ್ ಅವರು ಮಾತನಾಡಿದರು.


ಬಂಟ್ವಾಳ ತಾಲೂಕು ಒಕ್ಕಲಿಗ ಯಾನೆ ಗೌಡರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ಅನಿತಾಕೃಷ್ಣ, ಬಂಟ್ವಾಳ ಪುರಸಭಾ ಸದಸ್ಯೆ ಮೀನಾಕ್ಷಿ ಗೌಡ, ತಾಲೂಕು ಕಚೇರಿ ಶಿರಸ್ತೇದಾ‌ರ್ ಎಂ.ಶ್ರೀನಿಧಿ, ಉಪತಹಸೀಲ್ದಾ‌ರ್ ದಿವಾಕರ ಮುಗುಳಿಯ, ನವೀನ್ ಬೆಂಜನಪದವು, ಶಿವಪ್ರಸಾದ್, ರಾಜೇಶ್ ನಾಯ್ಕ, ಕಂದಾಯ ನಿರೀಕ್ಷಕ ವಿಜಯ್. ಆರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಶುಕುಮಾ‌ರ್ ಉಪಸ್ಥಿತರಿದ್ದರು. ಉಪತಹಸೀಲ್ದಾ‌ರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು. ಜನಾರ್ದನ ವಂದಿಸಿದರು.


ಉಪತಹಸೀಲ್ದಾ‌ರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು. ಜನಾರ್ದನ ವಂದಿಸಿದರು. ತಾಲೂಕು ಕಚೇರಿ ಸಿಬ್ಬಂದಿ, ಒಕ್ಕಲಿಗ ಯಾನೆ ಗೌಡರ ಸಂಘದ ಪೂರ್ವಾಧ್ಯಕ್ಷರು, ಪದಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *