ಬಂಟ್ವಾಳ: ಅಪ್ಪಟ್ಟ ದೇಶ ಪ್ರೇಮಿ,ದೂರದೃಷ್ಟಿಯುಳ್ಳ ರಾಜಕಾರಣಿ ಡಾI ಶ್ಯಾಮ್ ಪ್ರಸಾದ್ ಮುಖರ್ಜಿಯವರ ರಾಷ್ಟ್ರ ಪ್ರೇಮದ ಶಕ್ತಿಯು ರಾಷ್ಟ್ರ ಭಕ್ತರಾದ ನಮಗೆಲ್ಲರಿಗೂ ಪ್ರೇರಣಾ ಶಕ್ತಿಯಾಗಿದೆ ಎಂದು ಬಿ.ಜೆ.ಪಿ ಮುಖಂಡ ಪ್ರಭಾಕರ ಪ್ರಭು ಹೇಳಿದ್ದಾರೆ.


ಬಂಟ್ಚಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿ.ಜೆ.ಪಿ ಶಕ್ತಿ ಕೇಂದ್ರದ ವತಿಯಿಂದ ಪುಂಜಾಲಕಟ್ಟೆಯ ನಂದಗೋಕುಲ ಪ್ರಕಾಶ್ ಭಟ್ ರವರ ನಿವಾಸದಲ್ಲಿ ಆಯೋಜಿಸಲಾದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿರವರ ಪುಣ್ಯ ಸ್ಮರಣೆ  ಕಾರ್ಯಕ್ರಮದಲ್ಲಿ ಮುಖರ್ಜಿಯವರ ಭಾವ ಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ಅವರು ಮಾತಾನಾಡಿದರು

ಭವಿಷ್ಯತ್ ಕಾಲದ ಭಾರತದ ಆಡಳಿತ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ಪರ್ಯಾಯವಾಗಿ ಬೇರೊಂದು ರಾಜಕೀಯ ಪಕ್ಷದ ಅಗತ್ಯತೆ ಮತ್ತು ಅನಿರ್ವಾಯತೆಯನ್ನು ಮನಗಂಡ ಅಪ್ಪಟ್ಟ ದೇಶ ಪ್ರೇಮಿ, ಸೂಕ್ಷ್ಮ ದೃಷ್ಟಿಕೋನವುಳ್ಳ ,ದೂರದೃಷ್ಟಿಯುಳ್ಳ ರಾಜಕಾರಣಿ ಡಾI ಶ್ಯಾಮ್ ಪ್ರಸಾದ್ ಮುಖರ್ಜಿರವರು ದೇಶದ ಮೇಲಿಟ್ಟಿರುವ ದೇಶ ಭಕ್ತಿಯ ಬಗೆಗಿನ ಹಲವಾರು ಘಟನೆಗಳನ್ನು ನೆನಪಿಸಿಕೊಂಡಾಗ ಅವರಲ್ಲಿರುವ ರಾಷ್ಟ್ರ ಪ್ರೇಮದ ಶಕ್ತಿಯು ರಾಷ್ಟ್ರ ಭಕ್ತರಾದ ನಮಗೆಲ್ಲರಿಗೂ ಪ್ರೇರಣಾ ಶಕ್ತಿಯಾಗಿ ಮೂಡಿ ಬರುತ್ತದೆ ಎಂದು ಬಿ ಜೆ ಪಿ ಪ್ರಮುಖರಾದ ಪ್ರಭಾಕರ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು  .
ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂರವರ ಸಂಪುಟದಲ್ಲಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ  ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370 ನೇ ವಿಧಿಯನ್ನು ಜಾರಿಗೆ ತರಲು ಮುಂದಾದಾಗ  ಮುಖರ್ಜಿಯವರು ಈ ಮಸೂದೆಯನ್ನು ಬಲವಾಗಿ ವಿರೋಧಿಸಿದಲ್ಲದೆ ಖಂಡನೆ ವ್ಯಕ್ತಪಡಿಸಿ ಒಂದೇ ದೇಶದಲ್ಲಿ ಎರಡೆರಡು ಪ್ರಧಾನಿ ,ಸಂವಿಧಾನ, ಧ್ವಜ ಇರುವುದನ್ನು ಸಹಿಸಿಕೊಳ್ಳದೇ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದು  ಜನ ಸಂಘವನ್ನು ಸ್ಥಾಪಿಸಿ ತ್ಯಾಗ , ಬಲಿದಾನ ಮಾಡಿದವರಾಗಿದ್ದಾರೆ ಎಂದು ಪ್ರಭು ವಿವರಿಸಿದರು.
ಅವರ ಅಂದಿನ ಕನಸನ್ನು ನನಸು ಮಾಡಿ ಜಮ್ಮು ಕಾಶ್ಮೀರದ ವಿಶೆಷ ಸ್ಥಾನಮಾನದ 370ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ
ರದ್ದುಗೊಳಿಸಿ ಭಾರತದಲ್ಲಿ ಇತಿಹಾಸ ನಿರ್ಮಾಣ ಮಾಡಿದ್ದಾರೆ ಎಂದ ಅವರು ಈ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ವ್ಯಕ್ತಿ ನೋಡದೇ ದೇಶಕ್ಕಾಗಿ ಅಳಿಲ ಸೇವೆ ಮಾಡಲು ಕಟ್ಟಿಬದ್ದರಾಗಬೇಕು ಎಂದು ತಿಳಿಸಿದರು .
ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದ ,ಉಪಾಧ್ಯಕ್ಷ ಯೋಗೇಂದ್ರ ಕಮಂಗಿಲ , ಮಾಜಿ ಜಿ.ಪಂ.ಉಪಾಧ್ಯಕ್ಷ ತುಂಗಪ್ಪ ಬಂಗೇರ ,ಗ್ರಾ.ಪಂ.ಸದಸ್ಯರಾದ ಹರ್ಷಿಣಿ ಪುಷ್ಪನಾಂದ, ಲಕ್ಷ್ಮೀ ಜೆ ಬಂಗೇರ ,ಚಂದ್ರಶೇಖರ ಶೆಟ್ಟಿ ಕಮಂಗಿಲ , ಲಕ್ಷ್ಮೀ ನಾರಾಯಣ ಹೆಗಡೆ, ಕಾಂತಪ್ಪ ಕರ್ಕೆರ , ಪ್ರಕಾಶ್ ಭಟ್ ಮತ್ತಿತರರು  ಉಪಸ್ಥಿತರಿದ್ದರು. 

By suddi9

Leave a Reply

Your email address will not be published. Required fields are marked *