ಬಂಟ್ವಾಳ: ತಾಲೂಕಿನ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ಎರಡು ಲಕ್ಷ ರೂ.ಅನುದಾನದ ಚೆಕ್ ನ್ನು ಜಿಲ್ಲಾ ನಿರ್ದೇಶಕರಾದ ದಿನೇಶ್ ಪೂಜಾರಿಯವರು ದೇವಸ್ಥಾನದ ಅರ್ಚಕರಾದ ವೇ.ಮೂ. ಸುದರ್ಶನ್ ಬಳ್ಳಾಲ್  ರವರಿಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ  ಕಾರ್ಯಧ್ಯಕ್ಷರಾದ ಸೀತಾರಾಮ, ತಾಲೂಕು ಯೋಜನಾಧಿಕಾರಿ ಜಯಾನಂದ ಪಿ.,  ಕೇಂದ್ರ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ಸದಾನಂದ ನಾವೂರು, ತೇಜ್ ಪಾಲ್ ಜೈಲ್, ಮೇಲ್ವಿಚಾರಕರಾದ ರಾಜೇಶ್, ಸೇವಾ ಪ್ರತಿನಿಧಿಗಳಾದ ವಿಜಯ, ಸುನಿತಾ ಉಪಸ್ಥಿತರಿದ್ದರು 

By suddi9

Leave a Reply

Your email address will not be published. Required fields are marked *