ಬಂಟ್ವಾಳ: ಬಿ.ಸಿ.ರೋಡಿನ‌ ಸ್ಪರ್ಶಾ ಕಲಾಮಂದಿರದಲ್ಲಿ ತುಳುಕೂಟ ಬಂಟ್ವಾಳ ಇದರ ಆಶ್ರಯದಲ್ಲಿ ನಡೆಯುತ್ತಿರುವ “ತುಳುವೆರೆನ ತುಳುನಾಡ ಸಂತೆ” ಕುಕ್ಕು,ಪೆಲಕಾಯಿದ ಒಟ್ಟು ತುಳು ಸಾಹಿತ್ಯ ಸಾಂಸ್ಕೃತಿಕ ರಂಗ್  ವಿಶೇಷ ಕಾರ್ಯಕ್ರಮದ ಎರಡನೇ ದಿನವಾದ   ಶನಿವಾರ ವಿಚಾರಗೋಷ್ಠಿ,ತುಳುವೆರೆ ಪದಗೊಂಚಿಲ್, ಬಹುಭಾಷಾ ಕವಿಗೋಷ್ಠಿ ನಡೆಯಿತು.‌

ಬೆಳಿಗ್ಗೆ ನಡೆದ ಹಣ್ಣುಹಂಪಲುಗಳ ಕೃಷಿ ಮತ್ತು ವಿವಿಧ ಹಣ್ಣುಗಳ ಉತ್ಪನ್ನಗಳ ತಯಾರಿಕೆ-ಮಾಹಿತಿ‌ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ,ಬಂಟವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಅವರು ಹಲಸಿನ ಗಿಡಕ್ಜೆ ಜಲಪ್ರೋಕ್ಷಣೆ ಮಾಡುವ ಮೂಲಕ ಉದ್ಘಾಟಿಸಿದರು.

ಬಂಟ್ವಾಳ ವ್ಯ.ಸೇ.ಸ.ಸಂಘದ ಉಪಾಧ್ಯಕ್ಷ ಆದಿರಾಜ್ ಜೈನ್ ಸಭಾಧ್ಯಕ್ಷತೆ ವಹಿಸಿದ್ದರು.ವಿಟ್ಲ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷರಾಮ್ ಕಿಶೋರ್ ಅವರು ಹಣ್ಣುಗಳ ಮೌಲ್ಯವರ್ಧನ ಹಾಗೂಬಿ.ಸಿ.ರೋಡು ಬೊಲ್ಪು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ರಾಜಾ ಬಂಟ್ವಾಳ ಅವರು ತೆಂಗು ಮೌಲ್ಯವರ್ಧನದ ಕುರಿತು ಮಾಹಿತಿ ನೀಡಿದರು.

ಅಮ್ಟಾಡಿ ವ್ಯ ಸೇ.ಸ.ಸಂಘದ ಅಧ್ಯಕ್ಷೆ ಮಲ್ಲಿಕಾ ಶಡಟ್ಟಿ,ಉದ್ಯಮಿಗಳಾದ ಭುವನೇಶ್ ಪಚ್ಚಿನಡ್ಕ,ರಾಮದಾಸ್ ಬಂಟ್ವಾಳ,ಹಂಝ ಬಸ್ತಿಕೋಡಿ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.

ಬಳಿಕ ನಡೆದ ತುಳುವೆರೆ ಪದಗೊಂಚಿಲ್ ಕಾರ್ಯಕ್ರಮವನ್ನು ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿಕುಂದರ್ ಉದ್ಘಾಟಿಸಿದರು.ತುಳುಕೂಟದ ಉಪಾಧ್ಯಕ್ಷ ಕೆ.ಸೀತಾರಾಮ ಶೆಟ್ಟಿ ಮತ್ತಿತರಿದ್ದರು.ಮಧ್ಯಾಹ್ನದ  ಬಳಿಕ ಕರ್ನಾಟಕ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಸಂಜಾಥ ಜಯಾನಂದ ಪೆರಾಜೆ ಅವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು.

ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್, ಕಾರ್ಯದರ್ಶಿ ಎಚ್.ಕೆ.ನಯನಾಡು,ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್ ಮೊದಲಾದವರು‌ ಉಪಸ್ಥಿತರಿದ್ದರು.

ಸಂಜೆ ಯಕ್ಷಗಾನ ನೃತ್ಯ ವೈಭವ ಸಾಂಸ್ಕೃತಿಕ ರಂಗ್ ನಡೆಯಿತು.

By suddi9

Leave a Reply

Your email address will not be published. Required fields are marked *