ಬಂಟ್ವಾಳ:ಇಲ್ಲಿನ ಹಿರಿಯ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ ನ್ಯಾಯಾಧೀಶೆ ಶ್ರೀಮತಿ ಭಾಗ್ಯಮ್ಮ ಅವರನ್ನು ಹುಣಸೂರು ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿರುವ ನಿಟ್ಟಿನಲ್ಲಿ ಗೌರವಾಭಿನಂದನೆ ಮತ್ತು ಬೀಳ್ಕೊಡುಗೆ ಸಮಾರಂಭ  ವಕೀಲರ ಸಂಘ (ರಿ), ಬಂಟ್ವಾಳ ದ ವತಿಯಿಂದ  ಗುರುವಾರ ನಡೆಯಿತು.

ನ್ಯಾಯಾಧೀಶೆ ಶ್ರೀಮತಿ ಭಾಗ್ಯಮ್ಮ ಅವರು ಮೂರು ವರ್ಷಗಳ ಕಾಲ ಸಲ್ಲಿಸಿದ ಸೇವೆಯನ್ನು ಗುರುತಿಸಿ ಅವರನ್ನು  ಸನ್ಮಾನಿಸಲಾಯಿತು. ಈ ವೇಳೆ ಅವರು ಬಾರ್ ಅಸೋಸಿಯೇಷನ್ ಗೆ  ಕೃತಜ್ಞತೆ ಸಲ್ಲಿಸಿದರು.
ವಕೀಲರ ಸಂಘ (ರಿ), ಬಂಟ್ವಾಳ ದ ಅಧ್ಯಕ್ಷರಾದ  ರಿಚರ್ಡ್ ಕೋಸ್ತಾ ಎಂ ರವರು ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು
ಹೆಚ್ಚುವರಿ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶರಾದ  ಕೃಷ್ಣಮೂರ್ತಿ ಎನ್.,  ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷರಾದ ದಯಾನಂದ ರೈ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಕೆ.ನರೇಂದ್ರ ಭಂಡಾರಿ ವಂದಿಸಿದರು.  ವಕೀಲರಾದ ಸ್ವರ್ಣ ಗೌರಿ ಕಾರ್ಯಕ್ರಮ ನಿರೂಪಿಸಿದರು.  ಹಿರಿಯ,ಕಿರಿಯ ವಕೀಲ ಮಿತ್ರರು ಉಪಸ್ಥಿತರಿದ್ದರು. 

By suddi9

Leave a Reply

Your email address will not be published. Required fields are marked *