ಪೊಳಲಿ:ಶ್ರೀ ಧರ್ಮಶಾಸ್ತ ಭಜನಾ ಮಂದಿರದ ಲೋಕಾರ್ಪಣೆ ಮತ್ತು ಮೇ.೧೬ರಿಂದ ಮೇ೨೦ಮಂಗಳವಾರದವರೇಗೆವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಈ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಥಾರದಿಂದ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಹಸಿರು ಹೊರೆಕಾಣಿಕೆಯು ಸುಮಾರು ೨೦ ಕುಣಿತ ಭಜನಾ ತಂಡಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ಸಾಗಿಬಂದು ಸಮರ್ಪಣೆ ಮಾಡಲಾಯಿತು.

ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಉಗ್ರಾಣ ಮೂಹೂರ್ತಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ನೂತನ ಶ್ರೀಧರ್ಮಶಾಸ್ತ ಭಜನಾ ಮಂದಿರದ ಅಧ್ಯಕ್ಷರು ಪದಾಧಿಕಾರಿಗಳು,ಶ್ರೀ ರಕ್ತೇಶ್ವರೀ ಸೇವಾ ಟ್ರಸ್ಟ್ ಇದರ ಪದಾಧಿಕಾರಿಗಳು ಸರ್ವಸದಸ್ಯರು ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಹಾಗೂ ಸೇವಾ ಪ್ರತಿನಿಧಿಗಳು ಉಪಸ್ತಿತರಿದ್ದರು.

ಮೇ ೧೮ರಂದು ಭಾನುವಾರ ಬೆಳಗ್ಗೆ ಘಂಟೆ ೭.೫೮ಕ್ಕೆ ಮಿಥೂನ ಲಗ್ನ ಸುಮೂಹೂರ್ತದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಧರ್ಮಶಾಸ್ತ ಭಜನಾ ಮಂದಿರದ ಲೋಕಾರ್ಪಣೆ ಹಾಗೂ ಶ್ರೀರಕ್ತೇಶ್ವರೀ ದೇವಿಯ ಪುನಃಪ್ರತಿಷ್ಠಾಕಲಾಶಾಭಿಷೇಕವು ಜರಗಲಿದೆ.
ಬೆಳಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ, ಮದ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಮಧ್ಯಾಹ್ನಗಂಟೆ ೧ರಿಂದ ಅನ್ನಸಂತರ್ಪಣೆ ಜರಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಕ್ತಿ ಗಾನರ್ಚನೆ ಶ್ರೀ ರೋಹಿತಾಕ್ಷ ಶೆಟ್ಟಿ ಮತ್ತು£ಬಳಗ ಸಾಕಿನಾಕ ಮುಂಬೈ ಇವರಿಂದ ಸಂಜೆ ೩ರಿಂದ ೫ ಗಂಟೆಯವರೆಗೆ ಸ್ಯಾಕ್ಪೋಷೋನ್ ಸಂಗೀತ ಕಾರ್ಯಕ್ರಮ ರಾಜೇಶ್ ಆರ್ ಕೆ ಸಾಣೂರುಪದವು ಇವರ ಬಳಗದಿಂದ ಸಂಜೆ ೬ರಿಂದ ಧಾರ್ಮಿಕ ಸಭಾಕಾರ್ಯಕ್ರಮ ರಾತ್ರಿ ೮ರಿಂದ ತುಳುನಾಡ ವೈಭವ ಪ್ರಾಯೋಜಕರು ಸೋಹನ್ ಆಳ್ವ ಮಲ್ಲೂರು.
ರಾತ್ರಿ ೯ ರಿಂದ ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರ ಮಕ್ಕಳ ಮೇಳ ತಲಕಳ ಬಜ್ಪೆಕೊಳಂಬೆ ಇವರಿಂದ ಶಿವಲೀಲಾ ಎಂಬ ಪುಣ್ಯ ಕಥಾಭಾಗವನ್ನು ಆಡಿತೋರಿಸಲಿದ್ದಾರೆ.
ಮೇ ೧೯ರಂದು ಸೋಮವಾರ ಸೂರ್ಯೋದಯದಿಂದ ಮರುದಿನ ಮಂಗಳವಾರದAದು ಸೂರ್ಯೋದಯದವರೇಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ಹಾಗೂ ಭಜನಾ ಮಂಗಳೋತ್ಸವ ನಡೆಯಲಿದೆ.
ಮೇ ೨೦ರಂದು ಮಂಗಳವಾರ ರಾತ್ರಿ ೯ ಗಂಟೇಗೆ ಶ್ರೀ ರಕ್ತೇಶ್ವರೀ ದೇವಿಯ ನೇಮೋತ್ಸವ ಜರಗಲಿದೆ.
