ಸುರತ್ಕಲ್: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಬೈಕಿನಿಂದ ಹಿಂಬಾಲಿಸಿಕೊಂಡು ಬಂದ ದುಷ್ಕಮರ್ಿಗಳಿಬ್ಬರು ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಸೋಮವಾರ ರಾತ್ರಿ 10.25ರ ಸುಮಾರಿಗೆ ಸುರತ್ಕಲ್ ಜಂಕ್ಷನ್ನಲ್ಲಿ ಸಂಭವಿಸಿದೆ. ಪುತ್ತೂರು ನಿವಾಸಿ ವಿನಯ್(25) ಚೂರಿ ಇರಿತಕ್ಕೆ ಒಳಗಾದವರು.

choori
ವಿನಯ್ ಕೆಲಸ ಮುಗಿಸಿ ಸುರತ್ಕಲ್ ಜಂಕ್ಷನ್ ಸಮೀಪದ ಲಲಿತ್ ಹೋಟೆಲ್ ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ದುಷ್ಕಮರ್ಿಗಳು ಚೂರಿಯಿಂದ ಇರಿದು ಹಲ್ಲೆಗೊಳಿಸಿದ್ದಾರೆ. ಇರಿತಕ್ಕೆ ಒಳಗಾದ ವಿನಯ್ ರಸ್ತೆ ಪಕ್ಕ ಬಿದ್ದಿದ್ದು ದುಷ್ಕಮರ್ಿಗಳು ಪರಾರಿಯಾಗಿದ್ದಾರೆ.
ಗಾಯಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರತ್ಕಲ್ ಠಾಣಾಧಿಕಾರಿ ನಟರಾಜ್ ಸ್ಥಳಕ್ಕೆ ಆಗಮಿಸಿದ್ದು, ಬಂದೋಬಸ್ತು ಕೈಗೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *