
ಬಾಗಲಕೋಟೆ ಜಿಲ್ಲೆ ಬೀಳಗಿಯಲ್ಲಿ ರೋಮಾಂಚನಕಾರಿ ಟಗರಿನ ಕಾಳಗ ನಡೆಯಿತು. ಸಿದ್ದೇಶ್ವರ ಹೈಸ್ಕೂಲ್ ಮೈದಾನದಲ್ಲಿ ರಾಷ್ಟ್ರಮಟ್ಟದ ಟಗರಿನ ಕಾಳಗ ನಡೆಯಿತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಈ ಕಾಳಗವನ್ನು ಆಯೋಜನೆ ಮಾಡಿದ್ದಾರೆ.
ಟಗರಿನ ಸಿಡಿಲಬ್ಬರದ ಡಿಚ್ಚಿಗೆ ಕೇಕೆ ಹಾಕಿ ಜನರು ಸಂಭ್ರಮ ವ್ಯಕ್ತಪಡಿಸಿದರು.
ಮೊದಲ ಬಹುಮಾನವಾಗಿ ಮಹಿಂದ್ರಾ ಟ್ರ್ಯಾಕ್ಟರ್, ದ್ವಿತೀಯ ಬಹುಮಾನ ರಾಯಲ್ ಎನ್ ಫೀಲ್ಡ್ ಸೇರಿದಂತೆ ಭರ್ಜರಿ ಬಹುಮಾನಗಳನ್ನು ನೀಡಲಾಗುತ್ತದೆ. ಮೊದಲ ಬಹುಮಾನ ಮೂಢಲಗಿ ಗಿಡ್ಡ ಟಗರು ಗಳಿಸಿದೆ. ಅಮೀನ್ ಬಾಯ್ ಮಚ್ಚಾ ದ್ವಿತೀಯ ಸ್ಥಾನ ಪಡೆದ ಟಗರು. ನಿನ್ನೆಯಿಂದ ಇಂದು 10 ಗಂಟೆವರೆಗೂ ಟಗರಿನ ಕಾಳಗ ನಡೆದಿದೆ.
