ಮಂಗಳೂರು: ಮುಂಬೈನ ಥಾಣೆಯ ಮೂಲದ ಮಹಿಳೆ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. 5 ವರ್ಷದಿಂದ ಕಾಣೆಯಾಗಿದ್ದ ಈ ಮಹಿಳೆ ಇದು ಮಕ್ಕಳ ಕೈಗೆ ಸೇರಿದ್ದಾರೆ. ಇದೀಗ ಈ ಮಕ್ಕಳು ತಾಯಿಯನ್ನು ಕಂಡು ಖುಷಿಯಾಗಿದ್ದಾರೆ. ನಾಪತ್ತೆಯಾಗಿದ್ದ ಮಹಿಳೆಯನ್ನು ಆಸ್ಮಾ ಎಂದು ಹೇಳಲಾಗಿದೆ. ಥಾಣೆಯ ಮಂಬ್ರಿಲ್​ನ ನಿವಾಸಿ ಆಸ್ಮಾ ಅವರು ಕೆಲ ವರ್ಷಗಳ ಹಿಂದೆ ಪತಿಯೊಂದಿಗೆ ವಿದೇಶದಲ್ಲಿದ್ದರು.ದಂಪತಿ ಮುಂಬೈನ ಥಾಣೆಯ ಮಂಬ್ರಿಲ್​ನಲ್ಲಿ ವಾಸವಾಗಿದ್ದರು. ಕೆಲ ಸಮಯದ ಬಳಿಕ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದ ಆಸ್ಮಾ, 2019ರ ಮೇನಲ್ಲಿ ಮನೆಯಿಂದ ನಾಪತ್ತೆಯಾಗಿದ್ದರು.

ಪತಿ ಮನೆಯಿಂದ ಮುಂಬೈನ ಬೈಕಲಾದಲ್ಲಿರುವ ತವರು ಮನೆಗೆ ರೈಲಿನಲ್ಲಿ ತೆರಳುತ್ತಿದ್ದಾಗ ಆಸ್ಮಾ ನಾಪತ್ತೆಯಾಗಿದ್ದಾರೆ. ಆಸ್ಮಾ ದಾರಿತಪ್ಪಿ ಮಂಗಳೂರಿಗೆ ಬಂದಿದ್ದರು. ಮಂಗಳೂರಿನ ಪಣಂಬೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡುರಾತ್ರಿ ಒಬ್ಬರೆ ನಡೆದುಕೊಂಡು ಹೋಗುತ್ತಿದ್ದ ಆಸ್ಮಾ ಅವರನ್ನು ಕಂಡ ವೈಟ್ ಡೌಸ್ ನಿರ್ಗತಿಕರ ಆಶ್ರಯ ತಾಣದ ಸಂಸ್ಥಾಪಕಿ ಕೊರಿನ್ ರಸ್ಕಿನಾ ರಕ್ಷಣೆ ಮಾಡಿದ್ದಾರೆ. ಆಶ್ರಯ ತಾಣಕ್ಕೆ ಬಂದು ಆಕೆಯನ್ನು ಸಾಕಿದ್ದಾರೆ. ಕೊರಿನ್ ರಸ್ಕಿನಾ ಆಕೆಯ ಕುಟುಂಬದವರನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ.

ಆದರೆ ಆಕೆ ಕುಟುಂಬ ಯಾವುದೇ ಸುಳಿವು ಸಿಗಲಿಲ್ಲ. ಇತ್ತೀಚೆಗೆ ಆಕೆ ತನ್ನ ತವರು ಮನೆ ಬೈಕಲಾ ವಿಳಾಸ ನೀಡಿದ್ದಾರೆ. ವಿಳಾಸದ ಆಧಾರದ ಮೇಲೆ ಕೊರಿನ್ ರಸ್ಕಿನಾ ಅವರು ಬೈಕಲಾ ಪೊಲೀಸ್ ಠಾಣೆಗೆ ಸಂಪರ್ಕಿಸಿದ್ದಾರೆ. ಪೊಲೀಸರು ಈ ವಿಚಾರವನ್ನು ಆಸ್ಮಾ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಕೂಡಲೆ ಆಸ್ಮಾ ಕುಟುಂಬಸ್ಥರು ವೈಟ್ ಡೌಸ್ ಸಂಸ್ಥೆಗೆ ಸಂಪರ್ಕಿಸಿ, ವಿಮಾನದ ಮೂಲಕಮಂಗಳೂರಿಗೆ ಬಂದಿದ್ದಾರೆ. ಬರೋಬ್ಬರಿ ಐದು ವರ್ಷದ ಹಿಂದೆ ಕಳೆದುಕೊಂಡ ತಾಯಿಯನ್ನು ಮತ್ತೆ ಕಂಡು ಮಕ್ಕಳು ಕಣ್ಣೀರು ಹಾಕಿದ್ದಾರೆ.

By suddi9

Leave a Reply

Your email address will not be published. Required fields are marked *