ಬೆಂಗಳೂರು: ಶಾಲಾ ಮಕ್ಕಳಿಗೆ ಹೊಸ ವರ್ಷದ ಕೊಡುಗೆ ನೀಡಲು ಸರ್ಕಾರ ಸಿದ್ಧತೆ ನಡೆಸಿದ್ದು, ಕ್ಷೀರಭಾಗ್ಯ ಯೋಜನೆಯನ್ನು ಐದು ದಿನಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಂಗಳವಾರ ತಮ್ಮ ಸ್ವ ಕ್ಷೇತ್ರದ ವರುಣಾದಲ್ಲಿ ಮಾತನಾಡಿದ ಸಿಎಂ, ಸದ್ಯ ಕ್ಷೀರಭಾಗ್ಯ ಯೋಜನೆಯಡಿ 8 ಲಕ್ಷ ಲೀಟರ್ ಹಾಲನ್ನು ಮಕ್ಕಳಿಗೆ ವಿತರಣೆ ಮಾಡಲಾಗುತ್ತಿದೆ. ಸೋಮವಾರ, ಮಂಗಳವಾರ ಮತ್ತು ಶುಕ್ರವಾರ ಹಾಲನ್ನು ನೀಡಲಾಗುತ್ತಿದೆ ಎಂದರು. ವಾರದಲ್ಲಿ ಐದು ದಿನ ಕ್ಷೀರಭಾಗ್ಯ ಯೋಜನೆಯಡಿ 1ರಿಂದ ಹತ್ತನೇ ತರಗತಿ ಮತ್ತು ಅಂಗನವಾಡಿ ಮಕ್ಕಳಿಗೆ ಹಾಲು ನೀಡಲು ಸರ್ಕಾರ ನಿರ್ಧರಿಸಿದೆ. 2015ರಿಂದ ಈ ಯೋಜನೆ ಜಾರಿಗೆ ಬರಲಿದೆ ಎಂದು ಸಿಎಂ ಹೇಳಿದರು.

ksheera bhagya

By suddi9

Leave a Reply

Your email address will not be published. Required fields are marked *