ಮಂಗಳೂರು: ಜಾದೂ ಮೂಲಕ ಬುದ್ಧಿ ಮಾಂದ್ಯತೆ ಕುರಿತಾಗಿ ಜನಜಾಗೃತಿ ಮೂಡಿಸಿ ಲಿಮ್ಕಾ ದಾಖಲೆ ಬರೆದಿದ್ದ ಪುತ್ತೂರು ಸುರೇಶ್ ನಾಯಕ್ ಅವರಿಗೆ ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಅಂಗವಿಕಲರ ಇಲಾಖೆಯ `ಆದರ್ಶ ವ್ಯಕ್ತಿ’ ರಾಷ್ಟ್ರ ಪ್ರಶಸ್ತಿ ದೊರಕಿದೆ. ವೈಯಕ್ತಿಕ ಸಾಧನೆ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಸರಕಾರ ಈ ಪ್ರಶಸ್ತಿ ನೀಡುತ್ತದೆ. ನಾಳೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರದಾನ ಮಾಡಲಿರುವರು. ಪ್ರಶಸ್ತಿ ಪತ್ರ ಹಾಗೂ 50 ಸಾವಿರ ರೂ. ನಗದನ್ನು ಒಳಗೊಂಡಿದೆ.

