ಬೆಂಗಳೂರು: ವೇತನ ಪರಿಷ್ಕರಣೆಗೆ ಆಗ್ರಹಿಸಿ ರಾಷ್ಟ್ರೀಕೃತ ಬ್ಯಾಂಕ್ ನೌಕರರು ಡಿ.2ರ ಮಂಗಳವಾರ ರಾಜ್ಯಾದ್ಯಂತ ಮುಷ್ಕರ ಹಮ್ಮಿಕೊಂಡಿದ್ದಾರೆ. ಇದರಿಂದ ಬ್ಯಾಂಕ್ ಗ್ರಾಹಕರು ಪರದಾಟ ಎದುರಿಸಲಿದ್ದಾರೆ. ಡಿ.2ರಂದು ಬೆಳಗ್ಗೆ 10 ಗಂಟೆಗೆ ಪುರಭವನದಿಂದ ಮೆರವಣಿಗೆ ಆರಂಭಿಸಿ, ಮೈಸೂರು ಬ್ಯಾಂಕ್ ಕೇಂದ್ರ ಕಚೇರಿವರೆಗೆ ತೆರಳಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.

bundh

ಶೇ 25ರಷ್ಟು ವೇತನ ಹೆಚ್ಚಳ ಮಾಡಬೇಕೆಂದು ನೌಕರರು ಒತ್ತಾಯಿಸುತ್ತಿದ್ದಾರೆ. ಆದರೆ, ಬ್ಯಾಂಕ್ ಆಡಳಿತ ಮಂಡಳಿ ಶೇ 11ರವರೆಗೆ ವೇತನ ಹೆಚ್ಚಳಕ್ಕೆ ಸಮ್ಮತಿ ಸೂಚಿಸಿವೆ. ಇದನ್ನು ನೌಕರರು ತಿರಸ್ಕರಿಸಿದ್ದು, ವೇತನ ಹೆಚ್ಚಿಸಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ನೌಕರ ಮುಷ್ಕರದಿಂದಾಗಿ ಮಂಗಳವಾರ ಬ್ಯಾಂಕ್ ಕೆಲಸಗಳಿಗೆ ಅಡ್ಡಿಯಾಗಲಿದೆ.

By suddi9

Leave a Reply

Your email address will not be published. Required fields are marked *