ಬೆಂಗಳೂರು : ನಗರ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಸುದ್ದಿವಾಹಿನಿಗಳಾದ ಟಿವಿ9 ಹಾಗೂ ನ್ಯೂಸ್9 ಚಾನೆಲ್‌ಗಳ ಪ್ರಸಾರವನ್ನು ಕಳೆದ 17 ಗಂಟೆಗಳಿಂದ ಸ್ಧಗಿತಗೊಳಿಸಿರುವುದಕ್ಕೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿರುವ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಕಾರ್ಯನಿರತ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಕ್ರಮವನ್ನು ಖಂಡಿಸಿರುವ ಎಲ್ಲಾ ಸುದ್ದಿವಾಹಿನಿಗಳ ಸಂಪಾದಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲು ನಿರ್ಧರಿಸಿದ್ದಾರೆ.Tv9

ಈ ಬಗ್ಗೆ ಪ್ರೆಸ್ ಕ್ಲಬ್ ನಲ್ಲಿ ಸಭೆ ನಡೆಸಿರುವ ಪತ್ರಿಕೆ, ಸುದ್ದಿವಾಹಿನಿಗಳ ಸಂಪಾದಕರು ಸಿ.ಎಂ ಭೇಟಿ ಮಾಡಲು ನಿರ್ಧರಿಸಿದ್ದಾರೆ. ಟಿವಿ9 ನಿರ್ದೇಶಕ ಮಹೇಂದ್ರ ಮಿಶ್ರಾ, ಉದಯವಾಣಿ ಪತ್ರಿಕೆಯ ಸಂಪಾದಕ ರವಿ ಹೆಗಡೆ, ಕನ್ನಡ ಪ್ರಭ ಪತ್ರಿಕೆಯ ಸಂಪಾದಕ ವಿಶ್ವೇಶ್ವರ್ ಭಟ್, ಸೇರಿದಂತೆ ಎಲ್ಲಾ ಪತ್ರಿಕೆ ಹಾಗೂ ಸುದ್ದಿ ವಾಹಿನಿಗಳ ಸಂಪಾದಕರು ವಿಧನಸೌಧಕ್ಕೆ ಭೇಟಿ ನೀಡಲಿದ್ದಾರೆ.

ಕೆಲ ದಿನಗಳ ಹಿಂದೆ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಕೇಬಲ್ ಆಪರೇಟರ್‌ಗಳ ನಡುವೆ ನಡೆದ ಸಭೆಯಲ್ಲಿ ಸುದ್ದಿವಾಹಿನಿಗಳ ಕೇಬಲ್ ಮೂಲಕ ಟಿವಿ9 ಪ್ರಸಾರವನ್ನು ಸ್ಧಗಿತಗೊಳಿಸುವಂತೆ ಆದೇಶಿಸಿದ್ದರು. ಇಲ್ಲವಾದರೆ ಕೇಬಲ್ ಸಂಸ್ಥೆಗಳ ಮೇಲೆ ಭಾರಿ ತೆರಿಗೆ ಹಾಗೂ ದಂಡ ವಿಧಿಸುವುದಾಗಿ ಸಚಿವರು ಹೇಳಿದ್ದರೆಂದು ಚಾನೆಲ್ ಆರೋಪಿಸಿದೆ.

By suddi9

Leave a Reply

Your email address will not be published. Required fields are marked *