ಮೂಡುಬಿದಿರೆ : ಸಹಕಾರ ಎಲ್ಲರಿಗೂ ಅವಕಾಶ ನೀಡಿದ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿ ಮಾತ್ರ ಪಲಾನುಭವಿಗಳಿಗೆ ಯಾವುದೇ ಸಹಕಾರಿ ಯಾ ಸರಕಾರದ ಯೋಜನೆಯ ಸವಲತ್ತುಗಳು ಪರಿಪೂರ್ಣವಾಗಿ ಸಿಗುತ್ತವೆ. ಸ್ವಾವಲಂಬಿ ಜೀವನಕ್ಕೆ ಅವಕಾಶ ನೀಡಿ ಆರ್ಥಿಕ ಭದ್ರತೆಯಲ್ಲಿ ಮತ್ತು ವ್ಯವಹಾರದಲ್ಲಿ ವಾಣಿಜ್ಯ ಬ್ಯಾಂಕುಗಳಿಗಿಂತ ಮುಂಚೂಣಿಯಲ್ಲಿರುವ ಸಹಕಾರಿ ರಂಗದಲ್ಲಿ ಗ್ರಾಹಕರೇ ಸಂಸ್ಥೆಯ ನಿಜವಾದ ಆಸ್ತಿಯಂತಿದ್ದಾರೆ.

ಈ ಸಹಕಾರಿ ರಂಗದಲ್ಲಿ ಯುವಜನಾಂಗವನ್ನು ತೊಡಗಿಸಿಕೊಂಡು ಸಹಕಾರಿ ವ್ಯವಸ್ಥೆಯನ್ನು ಅನುಕರಣೀಯ ಹೊಸತನದಿಂದ ಬೆಳೆಸುವ ಬಗ್ಗೆ ಚಿಂತನೆ ನಡೆಯಬೇಕಾಗಿದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ಹೇಳಿದರು. ಅವರು ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ. ಮಂಗಳೂರು, ಸಹಕಾರಿ ಇಲಾಖೆ ಮತ್ತು ಮೂಡುಬಿದಿರೆ ಕೋ.ಅಪರೇಟಿವ್ ಸರ್ವೆಸ್ ಬ್ಯಾಂಕ್  . ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಎಂ.ಸಿ.ಎಸ್ ಬ್ಯಾಂಕ್ನ ಕಲ್ಪವೃಕ್ಷ ಸಭಾಭವನದಲ್ಲಿ ಗುರುವಾರ ನಡೆದ 61ನೇ ದ.ಕ ಜಿಲ್ಲಾ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ “ಕಲ್ಪವೃಕ್ಷ” ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದರು.

ರೆ.ಫಾ.ಮೊ.ಎಡ್ವಿನ್ .ಸಿ.ಪಿಂಟೋ ಅವರಿಗೆ “ಕಲ್ಪವೃಕ್ಷ” ಪ್ರಶಸ್ತಿ ಪ್ರದಾ
sahkari kalpavriksha prashasti

ಆಲಂಗಾರಿನ ಮೌಂಟ್ ರೋಸರಿ ಸಮೂಹ ಸಂಸ್ಥೆಯ ನಿದೇರ್ಶಕ ರೆ.ಫಾ.ಮೊ.ಎಡ್ವಿನ್ .ಸಿ.ಪಿಂಟೋ ಅವರಿಗೆ ಶಾಲು,ಹಾರ ಫಲಪುಷ್ಪ, ಬೆಳ್ಳಿ ಸ್ಮರಣಿಕೆ ಹಾಗೂ 1 ಪವನ್ ಚಿನ್ನ ನೀಡಿ ಸಹಕಾರ “ಕಲ್ಪವೃಕ್ಷ” ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು. ತ್ವರಿತ ಸೇವೆ ಮತ್ತು ಗೌರವ ನೀಡುವುದರಿಂದ ಸಹಕಾರಿ ರಂಗದಲ್ಲಿ ಅಭಿವೃದ್ಧಿ ಸಾಧ್ಯವಾಗಿದೆ ಎಂದು ರೆ.ಫಾ.ಮೊ.ಎಡ್ವಿನ್ .ಸಿ.ಪಿಂಟೋ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಸಹಕಾರಿ ಸಂಘಗಳ ಉಪನಿಬಂಧಕರಾದ ಬಿ.ಕೆ.ಸಲೀಂ ಸಹಕಾರ ರಂಗ ಸರಕಾರದ ನೆರಳಿನಿಂದ ಹೊರತಾದ ಸ್ವಾವಲಂಬನೆ ಸಾಧಿಸುವಂತಾಗಬೇಕು. ಸಹಕಾರ ಎನ್ನುವುದು ಹಾಲಿದ್ದಂತೆ ಅದರ ಸದ್ಬಳಕೆ ನಮ್ಮ ಕೈಯಲ್ಲಿದೆ ಎಂದರು.
ಎಂಸಿಎಸ್ ಬ್ಯಾಂಕ್ನ ಅಧ್ಯಕ್ಷ ಕೆ.ಅಮರನಾಥ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ 2015ರಲ್ಲಿ ಬ್ಯಾಂಕ್ ಶತಮಾನೋತ್ಸವ ಸಂಭ್ರಮಕ್ಕೆ ಅಣಿಯಾಗುತ್ತಿದ್ದು ಸದಸ್ಯರಿಗೆ ಹೆಲ್ತ್ ಕಾರ್ಡ್ , ಹೆಚ್ಚುವರಿ ಶೇರುಗಳ ಸಹಿತ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು. ಸಹಕಾರಿ ಸಂಸ್ಥೆಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕ ಡಿ.ದೇವೇಂದ್ರಪ್ಪ, ಮೂಡುಬಿದಿರೆ ಸಹಕಾರಿ ತರಬೇತಿ ಕೇಂದ್ರದ ಪ್ರಾಂಶುಪಾಲೆ ಶ್ಯಾಮಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮ್ಮಾನ, ಅಭಿನಂದನೆ
ಬ್ಯಾಂಕಿನ ಹಿರಿಯ ಸಹಕಾರಿಗಳಾದ ವಸಂತ ಕುಮಾರ್, ಎಂ.ದಾಮೋದರ ಪ್ರಭು, ಮಹೇಂದ್ರ ಕುಮಾರ್, ಹಮ್ಮಬ್ಬ ಬ್ಯಾರಿ, ಭೋಜರಾಜ್ ಪೂವಣಿ, ಕೃಷ್ಣ ಶೆಣೈ, ಎಂ. ಉಮೇಶ್ ಕಾಮತ್, ಕೆ.ರಘುರಾಮ ಎನ್. ಶೆಣೈ, ತೆರೆಜಾ ತಾವ್ರೋ, ವಿಲಾಸಿನಿ ಅವರನ್ನು ಸಮ್ಮಾನಿಸಲಾಯಿತು.

ರಾಜ್ಯ ಪವರ್ ಲಿಫ್ಟಿಂಗ್ನಲ್ಲಿ ಚಿನ್ನದ ಪದಕ ವಿಜೇತವಿಲ್ ಜೋನ್ ಮೊನೀಸ್, ಪ್ರತಿಭಾ ಕಾರಂಜಿ ಪ್ರತಿಭಾನ್ವಿತ ನಿಹಾಲ್ ತಾವ್ರೋ, ಬ್ಯಾಂಕಿನ ಕಾನೂನು ಸಲಹೆಗಾರರಾದ ಎಂ.ಎಸ್.ಕೊಟ್ಯಾನ್, ಚೇತನ್ ವರ್ಮ, ಮನೋಜ್ ಶೆಣೈ ಸಹಕಾರಿ ಇಲಾಖೆಯ ಉತ್ತಮ ಅಧಿಕಾರಿಗಳಾದ ಮಂಗಳೂರಿನ ಪರಮೇಶ್ಚಂದ್ರ ಜೈನ್, ಜನಾರ್ಧನ, ಸಹಕಾರಿ ಸಂಸ್ಥೆಯಲ್ಲಿ ಕಾರ್ಯದರ್ಶಿಗಳಾಗಿ ನಿವೃತ್ತರಾದ ಮೂಡುಬಿದಿರೆ ಹೋಬಳಿಯ ಅರುಣ ಕುಮಾರ್, ಕೆ. ವೀರ ಸೇನ ಹೆಗ್ಡೆ , ಅಭಿವೃದ್ಧಿ ಬಗ್ಗೆ ಸಹಕಾರಿ ಸುಧೀರ್, ಬ್ಯಾಂಕಿನಲ್ಲಿ ಉತ್ತಮ ಸೇವೆಯಿಂದ ಗುರುತಿಸಿಕೊಂಡ ಸುಜಾತ, ಉದಯ ದೇವಾಡಿಗ, ಕೃಷ್ಣಾನಂದ ಕಾಮತ್ ಅವರನ್ನು ಅಭಿನಂದಿಸಲಾಯಿತು.

ಸಹಕಾರಿ ತರಬೇತಿ ಶಿಕ್ಷಣದಲ್ಲಿ 6 ರ್ಯಾಂಕ್ ಪಡೆದಿರುವ ಮೂಡುಬಿದಿರೆ ಸಹಕಾರಿ ತರಬೇತಿ ಕೇಂದ್ರದ ವಿದ್ಯಾರ್ಥಿಗಳಾದ ಉಷಾ, ನೇತ್ರಾವತಿ, ಭವ್ಯಾ, ಸುಕನ್ಯಾ, ಜನಾರ್ಧನ ಮತ್ತು ಅನುರಾಧ ಅವರನ್ನು ಗೌರವಿಸಲಾಯಿತು. ಸಹಕಾರಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ-ಚರ್ಚಾ ಸ್ಪ ರ್ಧಾ ವಿಜೇತರಿಗೆ, ಕನ್ನಡ, ಹಿಂದಿಯಲ್ಲಿ ಪ್ರತಿಭಾನ್ವಿತ 7 ಮತ್ತು 10ನೇ ತರಗತಿಯ 51 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಮತ್ತು 14 ಮಂದಿ ವಿಶೇಷ ಸಾಮಥ್ರ್ಯದ ಮಕ್ಕಳಿಗೆ ಆರ್ಥಿಕ ನೆರವು ವಿತರಿಸಲಾಯಿತು.

ಬ್ಯಾಂಕ್ನ ಉಪಾಧ್ಯಕ್ಷರಾದ ಜಾಜರ್್ ಮೊನೀಸ್, ನಿದರ್ೇಶಕರಾದ ಎಂ.ಬಾಹುಬಲಿ ಪ್ರಸಾದ್, ಎಂ.ಗಣೇಶ್ ನಾಯಕ್, ಡಾ.ಎಂ.ಪಾಂಡುರಂಗ ಮಲ್ಯ, ಎಂ.ಪದ್ಮನಾಭ, ಪ್ರೇಮ.ಎಸ್.ಸಾಲ್ಯಾನ್, ಮನೋಜ್ ಶೆಟ್ಟಿ, ಸಿ.ಎಚ್. ಅಬ್ದುಲ್ ಗಫೂರ್, ಅನಿತಾ ಶೆಟ್ಟಿ ಉಪಸ್ಥಿತರಿದ್ದರು. ಎಂ.ಬಾಹುಬಲಿ ಪ್ರಸಾದ್ ಸ್ವಾಗತಿಸಿದರು, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ಯದಶರ್ಿ ಎಂ.ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು. ನಿದರ್ೇಶಕರಾದ ಹೆಚ್. ಪ್ರೇಮಾನಂದ ಪ್ರಭು ವಂದಿಸಿದರು.

By Suddi9

Leave a Reply

Your email address will not be published. Required fields are marked *