ಮಂಗಳೂರು: ಮಂಗಳೂರಿನ SDPI, ನಿಷೇಧಿತ PFI ಮುಖಂಡರ ಮನೆಗಳ ಮೇಲೆ ಮತ್ತೆ ದಾಳಿ. ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ನೇತೃತ್ವದಲ್ಲಿ ಪಣಂಬೂರು, ಸುರತ್ಕಲ್, ಮಂಗಳೂರು ಗ್ರಾಮಾಂತರ, ಉಳ್ಳಾಲ ಸೇರಿ ಏಳೆಂಟು ಕಡೆ ದಾಳಿ ನಡೆದಿದ್ದು, ಮನೆಯನ್ನು ಸಂಪೂರ್ಣ ಪರಿಶೀಲನೆ ನಡೆಸುತ್ತಿದ್ದಾರೆ. ಐವರು ಪಿಎಫ್​​ಐ ಮುಖಂಡರನ್ನ ಪೊಲೀಸರು ವಶಕ್ಕೆ ಪಡೆದು, ಪಿಎಫ್​​ಐ ಮುಂಡರ ವಿರುದ್ಧ UAPA ಕಾಯ್ದೆ ಸೇರಿ ವಿವಿಧ ಸೆಕ್ಷನ್​​​ಗಳಡಿ ಕೇಸ್​ ದಾಖಲಿಸಲಾಗಿದೆ.

ಇನ್ನು ಮಂಗಳೂರು SDPI ಜಿಲ್ಕಾಧ್ಯಕ್ಷ ಅಬೂಬಕರ್ ಕುಳಾಯಿ ಮನೆ ಮೇಲು ದಾಳಿ ನಡೆಸಲಾಗಿದ್ದು, ಈ ವೇಳೆ ಮನೆಯಲ್ಲಿ ಅಬೂಬಕರ್ ಕುಳಾಯಿ ಇರಲಿಲ್ಲ ಎಂದು ತಿಳಿದುಬಂದಿದೆ.

ಆದ್ರೆ ನಿಷೇಧಿತ ಪಿಎಫ್​ ಐ ಸಂಘಟನೆಯ ಮುಖಂಡರನ್ನು ಎನ್​ಐಎ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದು, ಆರೋಪಿಗಳು ಸಾಕಷ್ಟು ಮಾಹಿತಿಯನ್ನು ಹೊರಹಾಕಿದ್ದಾರೆ. ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಪಿಎಫ್​ಐಗೆ ಟರ್ಕಿ ದೇಶದ ಜತೆ ಸಂಪರ್ಕ ಹೊಂದಿದ್ದ ಬಗ್ಗೆ ತಿಳಿದುಬಂದಿದ್ದು, ಟರ್ಕಿ, ಕತಾರ್​ ದೇಶಗಳಿಂದ ಹಣದ ಹೊಳೆಯೇ ಹರಿದುಬಂದಿದೆ ಎಂಬ ಮಾಹಿತಿ ಹೊರಬಿದ್ದಿದೆ. ಟರ್ಕಿ, ಕತಾರ್​ ದೇಶಗಳಿಂದ ಕೇರಳ ಮೂಲಕ ಪಿಎಫ್​ಐಗೆ ಹವಲಾ ಹಣ ಸಂದಾಯವಾಗುತ್ತಿತ್ತು. ನಂತರ ದೇಶದ ವಿವಿಧ ಕಡೆಗಳಲ್ಲಿರುವ ಪಿಎಫ್​ಐ ಖಾತೆಗಳಿಗೆ ವರ್ಗಾವಣೆಯಾಗುತ್ತಿತ್ತು ಎನ್ನಲಾಗುತ್ತಿದೆ. ಹೀಗೆ ಹರಿದುಬಂದ ಹಣವನ್ನು ದೇಶ ವಿರೋಧಿ ಕೃತ್ಯಕ್ಕೆ, ಸರ್ಕಾರದ ವಿರುದ್ಧದ ಪ್ರತಿಭಟನೆ, ಅಪರಾಧಿ ಕೃತ್ಯಗಳಲ್ಲಿ ಬಂಧಿತ PFI ಸದಸ್ಯರ ಕುಟುಂಬಗಳಿಗೆ ನೆರವು ಮತ್ತು ತರಬೇತಿ ಶಿಬಿರಗಳಿಗೆ ಬಳಕೆ ಮಾಡಲಾಗುತ್ತಿತ್ತು ಎಂಬೂದು ತನಿಖೆ ವೇಳೆ ತಿಳಿದುಬಂದಿದೆ.

By suddi9

Leave a Reply

Your email address will not be published. Required fields are marked *